alex Certify
ಕನ್ನಡ ದುನಿಯಾ       Mobile App
       

Kannada Duniya

‘ರಕ್ಷಾ ಬಂಧನ’ ಕ್ಕೆ ಮಹಿಳೆಯರಿಗೆ ಬಂಪರ್ ಕೊಡುಗೆ

ರಕ್ಷಾ ಬಂಧನದ ಸಲುವಾಗಿ ಉತ್ತರ ಪ್ರದೇಶದ ಮಹಿಳಾ ಪ್ರಯಾಣಿಕರಿಗೆ ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ ಬಂಪರ್ ಕೊಡುಗೆಯನ್ನ ನೀಡಿದೆ. ಆಗಸ್ಟ್ 25ರ ಮಧ್ಯರಾತ್ರಿಯಿಂದ ಆಗಸ್ಟ್ 26ರ ಮಧ್ಯ ರಾತ್ರಿಯವರೆಗೆ ಮಹಿಳಾ ಪ್ರಯಾಣಿಕರಿಗೆ ತನ್ನ ಸಾರಿಗೆ ಇಲಾಖೆಯ ಎಲ್ಲಾ ಬಸ್ ಗಳಲ್ಲಿ ಉಚಿತ ಪ್ರಯಾಣದ ಅವಕಾಶವನ್ನು ನೀಡಿದೆ.

ಎಸಿ ಕೋಚ್ ಸೇರಿದಂತೆ ಎಲ್ಲಾ ಬಗೆಯ ಯುಪಿಎಸ್ಆರ್ಟಿಸಿ ಬಸ್ ಗಳಲ್ಲಿ ಆಗಸ್ಟ್ 25 ಮತ್ತು 26 ರಂದು ಈ ಸೌಲಭ್ಯ ಲಭ್ಯವಿರಲಿದೆ. ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹೀಗೊಂದು ಕೊಡುಗೆಯನ್ನ ಎರಡು ದಿನಗಳ ಮಟ್ಟಿಗೆ ಜಾರಿ ಮಾಡಿದ್ದಾರೆ. ಅಂದಾಜಿನ ಪ್ರಕಾರ 134 ಬಸ್ ಗಳಲ್ಲಿ ಈ ವಿಶೇಷ ಯೋಜನೆ ಲಭ್ಯವಾಗಲಿದೆ. 2017ರಲ್ಲಿ ಕೂಡ ಉತ್ತರ ಪ್ರದೇಶ ಇಂತದ್ದೇ ವಿಶೇಷ ಯೋಜನೆಯನ್ನ ಜಾರಿಗೆ ತಂದಿತ್ತು.

ಉತ್ತರ ಪ್ರದೇಶಕ್ಕೂ ಮೊದಲು ದೆಹಲಿ ಮೆಟ್ರೋ ಸಾರಿಗೆ ಕೂಡ ರಾಖಿ ಹಬ್ಬದ ಪ್ರಯುಕ್ತ ಪ್ರಯಾಣಿಕರಿಗಾಗಿ ವಿಶೇಷ ಯೋಜನೆಯನ್ನು ಪ್ರಕಟಿಸಿದೆ. ರಾಖಿ ಹಬ್ಬದ ಪ್ರಯುಕ್ತವಾಗಿ ಮೆಟ್ರೋ ರೈಲಿನ ವೇಳಾಪಟ್ಟಿಯಲ್ಲಿ ಹೆಚ್ಚಿನ ಟ್ರಿಪ್ ಗೆ ದೆಹಲಿ ಮೆಟ್ರೊ ರೈಲು ನಿಗಮ ಅವಕಾಶ ಮಾಡಿಕೊಟ್ಟಿದೆ. ಆ ಪ್ರಕಾರ ಬೆಳಗ್ಗೆ 8 ಗಂಟೆಗೆ ಆರಂಭವಾಗ್ತಿದ್ದ ದೆಹಲಿ ಮೆಟ್ರೋ ಸಂಚಾರ ಎರಡು ದಿನಗಳ ಮಟ್ಟಿಗೆ ಬೆಳಗ್ಗೆ 6 ಗಂಟೆಯಿಂದ ಆರಂಭವಾಗಲಿದೆ.

ಇಷ್ಟೇ ಅಲ್ಲ ರಾಖಿ ಹಬ್ಬದ ಪ್ರಯುಕ್ತ 600 ಕ್ಕೂ ಹೆಚ್ಚುವರಿ ಟ್ರಿಪ್ ಗಳನ್ನ ಮೆಟ್ರೋ ರೈಲು ನಿಗದಿಪಡಿಸಿದೆ. ಶನಿವಾರ 253 ಹೆಚ್ಚುವರಿ ಟ್ರಿಪ್ ಪ್ಲ್ಯಾನ್ ಮಾಡಲಾಗಿದ್ದು, ಭಾನುವಾರ 598 ಹೆಚ್ಚುವರಿ ಟ್ರಿಪ್ ಮಾಡುವ ಸಾಧ್ಯತೆಗಳಿವೆ ಅಂತ ಹೇಳಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...