alex Certify
ಕನ್ನಡ ದುನಿಯಾ       Mobile App
       

Kannada Duniya

ರಾಮಲೀಲಾದಲ್ಲಿ ಮೋದಿಯವರನ್ನು ಹೊಗಳಿದ ರಾಜನಾಥ್

modi-3

ದೇಶದೆಲ್ಲೆಡೆ ರಾಮಲೀಲಾ ಕಳೆಕಟ್ಟಿದೆ. ರಾವಣ ದಹನ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತಿದೆ. ಈ ಬಾರಿ ಲಕ್ನೋ ಐಶ್ ಬಾಗ್ ರಾಮಲೀಲಾ ಮೈದಾನ ಮತ್ತಷ್ಟು ವಿಶೇಷತೆಗಳನ್ನು ಪಡೆದಿದೆ. ಪ್ರಧಾನಿ ನರೇಂದ್ರ ಮೋದಿ ಐಶ್ ಬಾಗ್ ರಾಮಲೀಲಾ ಮೈದಾನಕ್ಕೆ ಆಗಮಿಸಿ, ರಾವಣ ದಹನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು.

ನರೇಂದ್ರ ಮೋದಿ, ರಾಮ,ಲಕ್ಷ್ಮಣ ಹಾಗೂ ಹನುಮಂತನಿಗೆ ತಿಲಕವಿಟ್ಟು ಆರತಿ ಬೆಳಗಿದ್ರು. ಪ್ರಧಾನ ಮಂತ್ರಿಗೆ ಬಿಲ್ಲು, ಗದೆ, ರಾಮಚರಿತ ಮಾನಸ, ಹಿತ್ತಾಳೆಯಿಂದ ಮಾಡಿದ ಒಂದು ಸುದರ್ಶನ ಚಕ್ರ ಹಾಗೂ ರಾಮನ ಹೆಸರಿರುವ ಸ್ಕಾರ್ಫ್ ನೀಡಲಾಯ್ತು. ರಾವಣ ದಹನ ಮೋದಿ ಎದುರು ನಡೆಸದಿರಲು ನಿರ್ಧರಿಸಲಾಗಿದೆ. ಮೈದಾನ ಚಿಕ್ಕದಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ.

ಈ ವೇಳೆ ಮಾತನಾಡಿದ ರಾಜನಾಥ್ ಸಿಂಗ್, ಮೋದಿಯವರನ್ನು ಹಾಡಿ ಹೊಗಳಿದ್ರು. ಮೋದಿ ಭ್ರಷ್ಟಾಚಾರವನ್ನು ಹೊಡೆದೋಡಿಸಿದ್ದಾರೆ. ವಿಶ್ವ ಮಟ್ಟದಲ್ಲಿ ಭಾರತವನ್ನು ಎತ್ತರದ ಸ್ಥಾನಕ್ಕೇರಿಸಿದ್ದಾರೆ. ಪಿಎಂ ಶಕ್ತಿಶಾಲಿ ಹಾಗೂ ಪ್ರಬಲ ಭಾರತವನ್ನು ನಿರ್ಮಾಣ ಮಾಡಿದ್ದಾರೆ. ಭಾರತ ದುರ್ಬಲ ದೇಶವಲ್ಲ ಎಂಬ ಸಂದೇಶವನ್ನು ಇಡೀ ವಿಶ್ವಕ್ಕೆ ಹೇಳಿದ್ದಾರೆಂದು ರಾಜನಾಥ್ ಸಿಂಗ್ ಮೋದಿಯವರನ್ನು ಹೊಗಳಿದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...