alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿಗೆ ಅಮೂಲ್ಯ ಗಿಫ್ಟ್ ನೀಡಿದ ಮಹಿಳೆ

pm-modi_hc7iqtp-1

ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಅಭಿಮಾನಿಯೊಬ್ಬರು ಬೆಲೆ ಬಾಳುವ ಉಡುಗೊರೆ ನೀಡಿದ್ದಾರೆ. ರಾಜ್ಕೋಟ್ ನಲ್ಲಿ ವಾಸವಾಗಿರುವ 25 ವರ್ಷದ ಖುಷ್ಬು ಭಾರತದ ನಕಾಶೆಯೊಳಗೆ ಪ್ರಧಾನ ಮಂತ್ರಿ ಮೋದಿ ಚಿತ್ರ ಬಿಡಿಸಿದ್ದಾರೆ. ಈ ಕಲಾಕೃತಿಯ ವಿಶೇಷವೆಂದ್ರೆ ಇದನ್ನು ಕೇವಲ ಮಣಿ ಹಾಗೂ ದಾರದಿಂದ ಮಾಡಲಾಗಿದೆ.

ಈ ಕಲಾಕೃತಿಗಾಗಿ ಖುಷ್ಬು 10 ಕಿಮೀ ಉದ್ದದ ದಾರ ಹಾಗೂ 5 ಲಕ್ಷಕ್ಕಿಂತ ಹೆಚ್ಚು ಮಣಿಯನ್ನು ಬಳಸಿದ್ದಾರೆ. ಈ ಕಲಾಕೃತಿ ರಚನೆಗೆ 850 ಗಂಟೆ ಕೆಲಸ ಮಾಡಿದ್ದಾರೆ ಖುಷ್ಬು. ಗುರುವಾರ ಗುಜರಾತಿನ ಸಿಎಂ ವಿಜಯ್ ರೂಪಾನಿ ಹಾಗೂ ಸಚಿವ ಮೋಹನ್ ಕುಂಡಾರಿಯಾ ಜೊತೆ ಖುಷ್ಬು ಕಲಾಕೃತಿಯನ್ನು ಮೋದಿಯವರಿಗೆ ನೀಡಿದ್ದಾರೆ.

ಈ ಕಲಾಕೃತಿ 7 ಅಡಿ ಉದ್ದ ಹಾಗೂ 7 ಅಡಿ ಅಗಲವಿದೆ. ಇದು ಸುಮಾರು 350 ಕೆಜಿ ತೂಕವಿದೆ. 950 ಸೂಜಿಗಳನ್ನು ಇದಕ್ಕಾಗಿ ಬಳಸಲಾಗಿದೆಯಂತೆ. ಖುಷ್ಬುಗೆ ಲಿಮ್ಕಾ ಬುಕ್ ದಾಖಲೆಯ ಪ್ರಮಾಣ ಪತ್ರ ಕೂಡ ಸಿಕ್ಕಿದೆಯಂತೆ. ಪಿಎಂಗೆ ಈ ಗಿಫ್ಟ್ ನೀಡಿರೋದು ಖುಷಿ ವಿಷಯ ಎಂದು ಖುಷ್ಬು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...