alex Certify
ಕನ್ನಡ ದುನಿಯಾ       Mobile App
       

Kannada Duniya

“ಕಾವೇರಿಯೊಂದೇ ಅಲ್ಲ ಅನೇಕ ವಿಷ್ಯದಲ್ಲಿ ರಜನಿ ಮೌನಿಯಾಗಿದ್ದಾರೆ’’

ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಕಾವೇರಿ ಜಲ ವಿವಾದದಲ್ಲಿ ಶಾಂತವಾಗಿರುವ ಬಗ್ಗೆ ನಟ ಹಾಗೂ ರಾಜಕೀಯ ಪಕ್ಷದ ನಾಯಕ ಕಮಲ್ ಹಾಸನ್ ಪ್ರತಿಕ್ರಿಯೆ ನೀಡಿದ್ದಾರೆ. ಕಾವೇರಿ ಜಲ ವಿವಾದವೊಂದೇ ಅಲ್ಲ ಅನೇಕ ರಾಜಕೀಯ ವಿಚಾರಗಳಲ್ಲಿ ರಜನಿಕಾಂತ್ ಮೌನರಾಗಿದ್ದಾರೆಂದು ಕಮಲ್ ಹೇಳಿದ್ದಾರೆ.

ಕಳೆದ ತಿಂಗಳಷ್ಟೇ ಕಮಲ್ ಹಾಸನ್ ಮಕ್ಕಳ್ ನಿಧಿ ಮಯ್ಯುಂ ಎಂಬ ಪಕ್ಷವನ್ನು ಕಟ್ಟಿದ್ದಾರೆ. ಶೀಘ್ರವೇ ರಜನಿಕಾಂತ್ ರಾಜಕೀಯಕ್ಕೆ ಧುಮುಕಲಿದ್ದಾರೆ. ಈ ಮಧ್ಯೆ ಕಮಲ್ ಹಾಸನ್ ನೀಡಿರುವ ಈ ಪ್ರತಿಕ್ರಿಯೆ ಅನೇಕ ಪ್ರಶ್ನೆಗಳನ್ನು ಹುಟ್ಟಿಹಾಕಿದೆ.

ಕಾವೇರಿ ಜಲ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್ ಕೆಲ ದಿನಗಳ ಹಿಂದಷ್ಟೇ ತೀರ್ಪು ನೀಡಿದೆ. ತಮಿಳುನಾಡಿಗೆ ಕಡಿಮೆ ನೀರು ಬಿಡುವಂತೆ ಆದೇಶ ನೀಡಿದೆ. ಇದನ್ನು ವಿರೋಧಿಸಿ ತಮಿಳು ಚಿತ್ರರಂಗದ ಕಲಾವಿದರು ಪ್ರತಿಭಟನೆ ನಡೆಸಿದ್ದಾರೆ. ಆದ್ರೆ ರಜನಿಕಾಂತ್ ಪ್ರತಿಭಟನೆಯಲ್ಲಿ ಕಾಣಿಸಿಕೊಳ್ಳಲಿಲ್ಲ. ಇದು ವಾದ-ವಿವಾದಕ್ಕೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...