alex Certify
ಕನ್ನಡ ದುನಿಯಾ       Mobile App
       

Kannada Duniya

ಪಿಎಂ ಮೋದಿಗೆ ಸಿಕ್ತು ಸೂಪರ್ ಸ್ಟಾರ್ ರಜನಿಕಾಂತ್ ಬೆಂಬಲ

ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಮತ್ತೊಮ್ಮೆ ತಮಿಳುನಾಡು ಸೂಪರ್ ಸ್ಟಾರ್ ರಜನಿಕಾಂತ್ ಬೆಂಬಲ ಸಿಕ್ಕಿದೆ. ತಮಿಳುನಾಡಿನ ಎಲ್ಲ ಪಕ್ಷಗಳು ಮೋದಿ ನೀತಿಯನ್ನು ವಿರೋಧಿಸುತ್ತಿದ್ದರೆ ರಜನಿಕಾಂತ್  ಬೆಂಬಲಿಸಿದ್ದಾರೆ. ರಾಜಕೀಯಕ್ಕೆ ಕಾಲಿಡಲಿರುವ ರಜನಿಕಾಂತ್ ಒನ್ ಇಂಡಿಯಾ ಒನ್ ಎಲೆಕ್ಷನ್ ನೀತಿಯನ್ನು ಸಮರ್ಥಿಸಿಕೊಂಡಿದ್ದಾರೆ.

ಚೆನ್ನೈನಲ್ಲಿ ಮಾತನಾಡಿದ ರಜನಿಕಾಂತ್ ಒನ್ ಇಂಡಿಯಾ ಒನ್ ಎಲೆಕ್ಷನ್ ವಿಚಾರ ಒಳ್ಳೆಯದು. ಇದ್ರಿಂದ ಪಕ್ಷಗಳ ಹಣ ಹಾಗೂ ಸಮಯ ಉಳಿಯಲಿದೆ ಎಂದಿದ್ದಾರೆ. 2019 ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿ ರಜನಿಕಾಂತ್ ಇದ್ರ ಬಗ್ಗೆ ನಂತ್ರ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದ್ರು. ಇದಕ್ಕೂ ಮುಂಚೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ರಜನಿಕಾಂತ್ ಹೇಳಿದ್ದರು.

ಚೆನ್ನೈ ಹಾಗೂ ಸೇಲಂ ನಡುವೆ ನಿರ್ಮಾಣವಾಗ್ತಿರುವ 8 ಲೈನ್ ಎಕ್ಸ್ಪ್ರೆಸ್ ವೇ ಬಗ್ಗೆ ಮಾತನಾಡಿದ ರಜನಿಕಾಂತ್ ಇದ್ರಿಂದ ಸಾಕಷ್ಟು ಲಾಭವಿದೆ. ಸರ್ಕಾರ ಇದಕ್ಕಾಗಿ ಕೃಷಿ ಭೂಮಿಯನ್ನು ಪಡೆಯಬೇಕು. ಇದಕ್ಕೆ ಪ್ರತಿಯಾಗಿ ಭೂ ಮಾಲೀಕರಿಗೆ ಖುಷಿಯಾಗುವಷ್ಟು ಹಣವನ್ನು ನೀಡಬೇಕು ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...