alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ಪಕ್ಷದೊಂದಿಗೆ ರಜನಿ ರಾಜಕೀಯ ಇನ್ನಿಂಗ್ಸ್

rajini

ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ಎಂಟ್ರಿ ಕೊಡುವುದು ಪಕ್ಕಾ ಆಗಿದೆ. ಆದರೆ, ಅವರು ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಳ್ಳದೇ ಹೊಸ ಪಕ್ಷವನ್ನು ಸ್ಥಾಪಿಸುವ ಮೂಲಕ ರಾಜಕೀಯ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ.

ಇದಕ್ಕೆ ಪೂರ್ವಭಾವಿಯಾಗಿ ಅವರು ತಮಿಳುನಾಡಿನ ವಿವಿಧ ಜಿಲ್ಲೆಗಳ ಅಭಿಮಾನಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದಾರೆ.

ನಾನು ರಾಜಕೀಯಕ್ಕೆ ಬರುವುದು ದೇವರ ಇಚ್ಛೆಗೆ ಬಿಟ್ಟ ನಿರ್ಧಾರ ಎಂದಷ್ಟೇ ಹೇಳುವ ಮೂಲಕ ಕುತೂಹಲ ಮೂಡಿಸಿದ್ದ ಅವರು, ರಾಷ್ಟ್ರೀಯ ಚಿಂತನೆ ಒಳಗೊಂಡ ಭ್ರಷ್ಟಾಚಾರ ಮುಕ್ತ ಜನಪರ ಕಲ್ಯಾಣದ ಆಡಳಿತವನ್ನು ನೀಡುವ ಆಶಯದೊಂದಿಗೆ ಹೊಸ ಪಕ್ಷವನ್ನು ಸ್ಥಾಪಿಸುವ ಕುರಿತು ಅತ್ಯಾಪ್ತರ ಬಳಿ ಇಂಗಿತ ವ್ಯಕ್ತಪಡಿಸಿದ್ದಾರೆ.

ಜಯಲಲಿತಾ ನಿಧನದ ಬಳಿಕ ತಮಿಳುನಾಡಿನ ರಾಜಕೀಯದಲ್ಲಿ ಅನೇಕ ಬದಲಾವಣೆಗಳಾಗಿವೆ. ತಮ್ಮ ರಾಜಕೀಯ ಎಂಟ್ರಿಗೆ ಇದೇ ಸರಿಯಾದ ಸಂದರ್ಭ ಎಂದು ಭಾವಿಸಿರುವ ರಜನಿ ಡಿಸೆಂಬರ್ 12 ರಂದು ತಮ್ಮ ಹುಟ್ಟುಹಬ್ಬದ ದಿನ ಹೊಸ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಘೋಷಿಸಲಿದ್ದಾರೆ.

ಇದಕ್ಕೆ ಪೂರ್ವಭಾವಿಯಾಗಿ ಅಭಿಮಾನಿಗಳ ಸರಣಿ ಸಭೆ ನಡೆಸಿದ್ದು, ನಂತರದಲ್ಲಿ ಚಿತ್ರರಂಗದವರ ಜೊತೆಯಲ್ಲಿಯೂ ಸಮಾಲೋಚನೆ ನಡೆಸಲಿದ್ದಾರೆ.

ರಜನಿಕಾಂತ್ ಅವರಿಗೆ ಪಕ್ಷವನ್ನು ಸೇರುವಂತೆ ಬಿ.ಜೆ.ಪಿ. ಸೇರಿದಂತೆ ಅನೇಕ ಪಕ್ಷಗಳು ಆಹ್ವಾನಿಸಿವೆ. ಆದರೆ, ಅದೆಲ್ಲವನ್ನು ನಯವಾಗಿಯೇ ತಿರಸ್ಕರಿಸಿದ್ದ ಅವರು ರಾಜಕೀಯದಿಂದ ದೂರವೇ ಉಳಿದಿದ್ದರು.

1996 ರಲ್ಲಿ ಜಯಲಲಿತಾ ಅವರ ಬಗ್ಗೆ ನೀಡಿದ್ದ ಹೇಳಿಕೆಯೊಂದನ್ನು ಹೊರತುಪಡಿಸಿ ಎಂದೂ ಕೂಡ ರಜನಿ ರಾಜಕಾರಣದ ಮಾತನಾಡಿಲ್ಲ.

ಈಗ ಹೊಸ ಪಕ್ಷವನ್ನು ಸ್ಥಾಪಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದು, ಪೂರ್ವಭಾವಿ ಪ್ರಕ್ರಿಯೆಗಳನ್ನು ಆರಂಭಿಸಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...