alex Certify
ಕನ್ನಡ ದುನಿಯಾ       Mobile App
       

Kannada Duniya

ಹದ್ದುಮೀರಿದ ಅಭಿಮಾನಿಗೆ ರಜನಿಕಾಂತ್ ವಾರ್ನಿಂಗ್

rajinika

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ಬರುತ್ತಿರುವ ಕುರಿತಾಗಿ ವ್ಯಾಪಕ ಚರ್ಚೆಯಾಗಿದೆ. ಪರ, ವಿರೋಧ ಚರ್ಚೆ, ಪ್ರತಿಭಟನೆ ವಾಗ್ವಾದ ನಡೆದಿವೆ.

ರಜನಿಕಾಂತ್ ರಾಜಕೀಯಕ್ಕೆ ಬರದಂತೆ ತಮಿಳು ಸಂಘಟನೆಗಳ ಕಾರ್ಯಕರ್ತರು ಅವರ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು.

ಇದಾದ ಬಳಿಕ ರಜನಿ ಫ್ಯಾನ್ಸ್, ಅವರು ರಾಜಕೀಯಕ್ಕೆ ಬರಬೇಕೆಂದು ಮೆರವಣಿಗೆ ನಡೆಸಿದ್ದರು. ರಾಜಕೀಯ ಪ್ರವೇಶ ವಿಚಾರ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿರುವಂತೆಯೇ ರಜನಿಕಾಂತ್ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದರು.

ಅಭಿಮಾನಿಗಳ ಸಂಘದ ನಿಯಮಗಳನ್ನು ವಿರೋಧಿಸುವವರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಇತ್ತೀಚೆಗಷ್ಟೇ ಖಡಕ್ ವಾರ್ನಿಂಗ್ ಮಾಡಿದ್ದರು.

ಎಚ್ಚರಿಕೆ ನೀಡಿದ ನಂತರವೂ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಸೈದಾಪೇಟೆ ರಜನಿಕಾಂತ್ ಅಭಿಮಾನಿಗಳ ಸಂಘದ ಕಾರ್ಯದರ್ಶಿ ಜಿ. ರವಿ ಅವರನ್ನು ಉಚ್ಚಾಟಿಸಲಾಗಿದೆ. ರಜನಿ ಅಭಿಮಾನಿ ಸಂಘದ ಸಂಚಾಲಕ ಸುಧಾಕರನ್ ಅವರು ರವಿಯನ್ನು ಉಚ್ಛಾಟಿಸಿ ಆದೇಶ ಹೊರಡಿಸಿದ್ದಾರೆ.

ಈ ನಡುವೆ ರಜನಿಕಾಂತ್ ಮತ್ತೊಮ್ಮೆ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದು, ತಮ್ಮ ರಾಜಕೀಯ ವಿಚಾರ ಕುರಿತಾಗಿ ಅಭಿಮಾನಿಗಳು ಡಿಬೇಟ್ ಗಳಲ್ಲಿ ಭಾಗವಹಿಸುವುದಾಗಲಿ, ಹೇಳಿಕೆ ನೀಡುವುದಾಗಲಿ ಮಾಡಬಾರದು ಎಂದು ತಾಕೀತು ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...