alex Certify
ಕನ್ನಡ ದುನಿಯಾ       Mobile App
       

Kannada Duniya

ರಜನಿಕಾಂತ್ ಗೆ ರಾಜಕೀಯದಲ್ಲಿ ಸಿಗುತ್ತಾ ಸಕ್ಸಸ್…?

ದೇಶದ ರಾಜಕಾರಣದಲ್ಲಿ ತಮಿಳುನಾಡು ರಾಜಕಾರಣ ಭಿನ್ನವಾದುದು. ಚಿತ್ರರಂಗ ಮತ್ತು ರಾಜಕಾರಣ ಬೇರೆಯದೇ ಕ್ಷೇತ್ರಗಳಾದರೂ, ರಾಜಕಾರಣದಲ್ಲಿದ್ದವರು ಸಿನಿಮಾ ಕ್ಷೇತ್ರದಲ್ಲಿ, ಸಿನಿಮಾದಲ್ಲಿದ್ದವರು ರಾಜಕಾರಣದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಸಿನಿಮಾ ರಂಗದ ಅನೇಕರು ರಾಜಕಾರಣಕ್ಕೆ ಬಂದರೂ ನಿರೀಕ್ಷಿತ ಯಶಸ್ಸು ಕಂಡಿಲ್ಲ.

ತಮಿಳುನಾಡಿನಲ್ಲಿ ಚಿತ್ರರಂಗದವರು ಮುಖ್ಯಮಂತ್ರಿ ಹುದ್ದೆಗೇರಿದ್ದಾರೆ. ಕರುಣಾನಿಧಿ, ಎಂ.ಜಿ.ಆರ್., ಜಯಲಲಿತಾ ಅವರು ಚಿತ್ರರಂಗದಿಂದ ಬಂದು ಮುಖ್ಯಮಂತ್ರಿಯಾಗಿದ್ದಾರೆ. ಪಕ್ಕದ ಆಂಧ್ರ ಪ್ರದೇಶದಲ್ಲಿ ಎನ್.ಟಿ.ಆರ್. ಅವರು ಮುಖ್ಯಮಂತ್ರಿಯಾಗಿದ್ದರು. ಕರ್ನಾಟಕದಲ್ಲಿ ವರನಟ ಡಾ. ರಾಜ್ ಕುಮಾರ್ ಅವರು ಮುಖ್ಯಮಂತ್ರಿಯಾಗುವ ಅವಕಾಶವಿತ್ತಾದರೂ, ಅವರು ರಾಜಕಾರಣದಿಂದ ದೂರವೇ ಉಳಿದಿದ್ದರು.

ಇದೀಗ ತಮಿಳುನಾಡಿನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶದೊಂದಿಗೆ ಹೊಸ ಶಖೆ ಶುರುವಾಗಿದೆ. ರಾಜಕಾರಣದ ಆಗು ಹೋಗುಗಳನ್ನು ಬಲ್ಲವರಾದ ರಜನಿಕಾಂತ್ ತಮ್ಮ ಭಾಷಣದಲ್ಲಿ ಇದನ್ನು ಪ್ರಸ್ತಾಪಿಸಿದ್ದಾರೆ.

ಹೊಸ ಪಕ್ಷವನ್ನು ಘೋಷಿಸುತ್ತಿದ್ದೇನೆ. ಮುಂದೆ ತಮಿಳುನಾಡು ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ತಮಿಳುನಾಡು ರಾಜಕೀಯ ಹಲವು ಬದಲಾವಣೆ ಕಂಡಿದೆ. ರಜನಿಕಾಂತ್ ಅವರಿಗೆ ಅಪಾರ ಅಭಿಮಾನಿ ಬಳಗವಿದೆ. ಎಲ್ಲವನ್ನೂ ಯೋಚಿಸಿಯೇ ಅವರು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಬೇರೆ ಪಕ್ಷಗಳನ್ನು ಸೇರುವ ಬದಲಿಗೆ ತಮ್ಮದೇ ಆದ ಪಕ್ಷವನ್ನು ಸ್ಥಾಪಿಸಿದ್ದಾರೆ. ಸಿನಿಮಾದಲ್ಲಿ ಸೂಪರ್ ಸ್ಟಾರ್ ಆಗಿರುವ ರಜನಿ ರಾಜಕೀಯದ ಹಾದಿ ಕುರಿತು ಕುತೂಹಲ ಮೂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...