alex Certify
ಕನ್ನಡ ದುನಿಯಾ       Mobile App
       

Kannada Duniya

ಬೂಟ್ ನಲ್ಲಿ ನೀರು ಹಾಕಿ ಕುಡಿದರೆ ಭೂತ ಔಟ್..!

rajasthan-women-harassment-in-the-name-of-exorcism21 ನೇ ಶತಮಾನದಲ್ಲಿರುವ ನಾವು ಮಹಿಳೆಯರ ಬಗ್ಗೆ, ಅವರ ಸಶಕ್ತಿಕರಣದ ಬಗ್ಗೆ ಎಷ್ಟೇ ಮಾತನಾಡಿದರೂ ಕೆಲವೊಂದು ಕಡೆ ಮಹಿಳೆಯರ ಮೇಲಿನ ಶೋಷಣೆಗಳು ಅವ್ಯಾಹತವಾಗಿ ಸಾಗಿದೆ. ರಾಜಸ್ತಾನೀಯರ ಭೂತೋಚ್ಛಾಟನೆಯ ಈ ವಿಧಿಗಳು ಕೂಡ ಮಹಿಳೆಯ ಶೋಷಣೆಯ ಇನ್ನೊಂದು ಮುಖ.

ರಾಜಸ್ತಾನದ ಭೀಲವಾಡಾದಲ್ಲಿ ಭೂತವನ್ನು ಓಡಿಸುವ ನೆಪದಲ್ಲಿ ಮಹಿಳೆಯರನ್ನು ತೀರಾ ಅಮಾನವೀಯವಾಗಿ ಶೋಷಿಸಲಾಗುತ್ತದೆ. ಇಲ್ಲಿ ಬಂಕಾಯಾ ದೇವಿಯ ಮಂದಿರದಲ್ಲಿ ಭೂತವನ್ನು ಓಡಿಸಲಾಗುತ್ತದೆ. ಮಹಿಳೆಯರ ಮೇಲೆ ಬಂದಿರುವ ಭೂತ ತೊಲಗಿ ಹೋಗಬೇಕೆಂದರೆ ಮಹಿಳೆಯರು ತಲೆಯ ಮೇಲೆ ಬೂಟುಗಳನ್ನಿಟ್ಟುಕೊಳ್ಳಬೇಕು. ಅಷ್ಟೇ ಅಲ್ಲ ಆ ಬೂಟಿನ ಒಳಗೆ ನೀರು ತುಂಬಿಸಿಕೊಂಡು ನೀರನ್ನು ಕುಡಿಯಬೇಕು.

ಬೂಟನ್ನು ತಲೆಯ ಮೇಲೆ ಹೊತ್ತ ಮಹಿಳೆಯರು ಕೆಲವು ಕಿಲೋಮೀಟರ್ ನಡೆಯಬೇಕು. ಭೂತ ಬಂದ ಮಹಿಳೆಯರ ಕೂದಲನ್ನು ಹಿಡಿದು 200 ಮೆಟ್ಟಿಲುಗಳ ಮೇಲೆ ಅವರನ್ನು ಎಳೆದೊಯ್ಯಲಾಗುತ್ತದೆ. ಇಂತಹ ಹೇಯ ಕೃತ್ಯಗಳು ನಡೆಯುತ್ತಿದ್ದಾಗ ಪುರುಷರು ನಿಂತು ನೋಡುತ್ತಾರೆ. ಈ ಭೂತೋಚ್ಛಾಟನೆ ಹಲವು ವರ್ಷಗಳಿಂದ ನಡೆಯುತ್ತಿದೆ. ಆದರೆ ಇದನ್ನು ತಡೆಯುವ ಪ್ರಯತ್ನ ಮಾತ್ರ ಯಾರೂ ಮಾಡಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...