alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಸ್ತಾನ, ಪಶ್ಚಿಮ ಬಂಗಾಳ ಉಪ ಚುನಾವಣೆಯಲ್ಲಿ ಬಿಜೆಪಿಗೆ ಸೋಲು

ರಾಜಸ್ತಾನ ಮತ್ತು ಪಶ್ಚಿಮ ಬಂಗಾಳದ 5 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿದೆ. ರಾಜಸ್ತಾನದ 2 ಲೋಕಸಭಾ ಕ್ಷೇತ್ರಗಳು ಹಾಗೂ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ.

ಪಶ್ಚಿಮ ಬಂಗಾಳದ ಎರಡೂ ಕ್ಷೇತ್ರಗಳು ತೃಣಮೂಲ ಕಾಂಗ್ರೆಸ್ ಪಾಲಾಗಿವೆ. ಅಜ್ಮೇರ್ ಹಾಗೂ ಅಲ್ವಾರ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಭಾರೀ ಅಂತರದಿಂದ ಬಿಜೆಪಿಯನ್ನು ಮಣಿಸಿದೆ. ಮಂಡಲಗಢ ವಿಧಾನಸಭಾ ಕ್ಷೇತ್ರದಲ್ಲಿ ಕೈಪಕ್ಷದ ಅಭ್ಯರ್ಥಿ ಸುಮಾರು 12,000 ಮತಗಳಿಂದ ಗೆಲುವು ಸಾಧಿಸಿದ್ದಾರೆ.

ಅಜ್ಮೇರ್ ನಲ್ಲಿ ಬಿಜೆಪಿಯ ರಾಮಸ್ವರೂಪ್ ಲಂಬಾ ವಿರುದ್ಧ ಕಾಂಗ್ರೆಸ್ ನ ರಘು ಶರ್ಮಾ ಜಯಗಳಿಸಿದ್ದಾರೆ. ಅಲ್ವಾರ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕರಣ್ ಸಿಂಗ್ ಯಾದವ್ ವಿರುದ್ಧ ಕೇಸರಿ ಪಕ್ಷದ ಜಸ್ವಂತ್ ಸಿಂಗ್ ಯಾದವ್ ಸೋಲು ಅನುಭವಿಸಿದ್ದಾರೆ.

ಈ ವರ್ಷಾಂತ್ಯದಲ್ಲಿ ರಾಜಸ್ತಾನ ವಿಧಾನಸಭಾ ಚುನಾವಣೆ ನಡೆಯಲಿದ್ದು, ಉಪಚುನಾವಣೆ ಫಲಿತಾಂಶ ಬಹಳ ಮಹತ್ವದ್ದೆನಿಸಿದೆ. 2013ರಲ್ಲಿ ಬಿಜೆಪಿಯ ವಸುಂಧರಾ ರಾಜೆ ಸರ್ಕಾರ ಭಾರೀ ಬಹುಮತದಿಂದ ಜಯಗಳಿಸಿತ್ತು. 3 ಕ್ಷೇತ್ರದ ಪ್ರತಿನಿಧಿಗಳ ಹಠಾತ್ ನಿಧನದಿಂದಾಗಿ ಉಪಚುನಾವಣೆ ನಡೆದಿದೆ.

ಇನ್ನು ಪಶ್ಚಿಮ ಬಂಗಾಳದಲ್ಲಿ ಉಲುಬೆರಿಯಾ ಲೋಕಸಭಾ ಕ್ಷೇತ್ರ ಹಾಗೂ ನೌಪಾರಾ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಟಿಎಂಸಿ ನಿರಾಯಾಸ ಗೆಲುವು ಸಾಧಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...