alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಸ್ಥಾನದ ಮಿಯಾನ್‌ ಕಾ ಬಾರಾ ಇನ್ನು ಮಹೇಶ್‌ ನಗರ

ರಾಜಸ್ಥಾನದ ಬರ್ಮಾರ್‌ ಗ್ರಾಮದಲ್ಲಿನ ರೈಲ್ವೆ ನಿಲ್ದಾಣಕ್ಕೆ ಮಹೇಶ್‌ ನಗರ ಎಂದು ಮರು ನಾಮಕರಣ ಮಾಡಲಾಗಿದೆ. ಇದಕ್ಕೆ ಕಾರಣ ಕೇಳಿದರೆ, ಆಶ್ಚರ್ಯ ಪಡುವುದು ಮಾತ್ರ ಖಚಿತ.

ಈ ಗ್ರಾಮದಲ್ಲಿರುವವರಿಗೆ ಮದುವೆ ಸಂಬಂಧಗಳು ಬರುತ್ತಿಲ್ಲ ಎಂಬ ಕಾರಣಕ್ಕೆ ಕಳೆದ 10 ವರ್ಷಗಳಿಂದ ಹೆಸರು ಬದಲಾಯಿಸಲು ಮನವಿ ಮಾಡುತ್ತಿದ್ದರು. ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾಲದಲ್ಲಿ ಈ ಭಾಗಕ್ಕೆ ಮಿಯಾನ್‌ ಕಾ ಬಾರಾ ಎಂದು ಹೆಸರಿತ್ತು. ಇದೇ ಹೆಸರಿನಲ್ಲಿ ರೈಲ್ವೆ ನಿಲ್ದಾಣವೂ ಇತ್ತು. ಈ ಹೆಸರಿನಿಂದಾಗಿ ಈ ಭಾಗಕ್ಕೆ ಮದುವೆ ಸಂಬಂಧಗಳೇ ಬರುತ್ತಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಮಹೇಶ್‌ ನಗರ ಎಂದು ಮರುನಾಮಕರಣ ಮಾಡುವಂತೆ ಮನವಿ ಮಾಡಲಾಗಿತ್ತು. ಇದೀಗ ಇದಕ್ಕೆ ಒಪ್ಪಿಗೆ ಸೂಚಿಸಲಾಗಿದ್ದು, ಹೊಸ ಹೆಸರನ್ನು ಅಧಿಕೃತಗೊಳಿಸಲಾಗಿದೆ.

ಶಿವ ಅಸ್ತಿತ್ವ ಇರುವ ಜಾಗವಾಗಿರುವುದರಿಂದ ಈ ಭಾಗಕ್ಕೆ ಮಹೇಶ್‌ ನಗರ ಎಂದು ಹೆಸರಿಡಲಾಗಿದೆ. ಬಹಳ ವರ್ಷಗಳ ಹಿಂದೆ ಇದು ಮಹೇಶ್‌ ನಗರವೇ ಆಗಿತ್ತು. ಆದರೆ ಕಾಲ ಕ್ರಮೇಣ ಹೆಸರು ಬದಲಾಗಿದೆ ಎಂದು ಈ ಭಾಗದ ಶಾಸಕ ಹಮ್ರೀಶ್‌ ಸಿಂಗ್‌ ಭಾಯಲ್‌ ತಿಳಿಸಿದ್ದಾರೆ. ಒಟ್ಟಾರೆ ಕೇಂದ್ರ ಗೃಹ ಇಲಾಖೆಯಲ್ಲಿ 27 ಮರು ನಾಮಕರಣಕ್ಕೆ ಮನವಿಗಳಿದ್ದು, ಇದರಲ್ಲಿ 8 ರಾಜಸ್ಥಾನದಿಂದಲೇ ಇವೆ ಎಂದು ತಿಳಿದು ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...