alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಸ್ತಾನದ ಕಾಶ್ಮೀರ ಉದಯಪುರ

ಉದಯಪುರ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದು, ಇದನ್ನು ರಾಜಸ್ತಾನದ ಕಾಶ್ಮೀರ, ಪೂರ್ವದೇಶದ ವೆನಿಸ್, ಸರೋವರಗಳ ನಗರ ಮೊದಲಾದ ಹೆಸರುಗಳಿಂದ ಕರೆಯಲಾಗುತ್ತದೆ.

ಹಸಿರಿನ ಅರಾವಳಿ ಪರ್ವತಗಳಿಂದ ಸುತ್ತುವರೆದ ರಮ್ಯವಾದ ನಗರ ಉದಯಪುರ. ಪ್ರಕೃತಿ ಸೌಂದರ್ಯದಿಂದ ಗಮನಸೆಳೆಯುವ ಉದಯಪುರ ಕೆರೆಗಳು, ಸರೋವರಗಳ ಮಧ್ಯಭಾಗದಲ್ಲಿನ ಕಲಾತ್ಮಕ ಭವನಗಳು, ಸುಂದರವಾದ ಸರೋವರಗಳು, ಉದ್ಯಾನಗಳು ದೇವಾಲಯಗಳಿವೆ.

ಪಿಚೌಲಾ ಸರೋವರ 5 ಕಿಲೋ ಮೀಟರ್ ಉದ್ದ, 1.6 ಕಿಲೋ ಮೀಟರ್ ಅಗಲ ವಿಸ್ತೀರ್ಣವನ್ನು ಹೊಂದಿದೆ. ಇಲ್ಲಿನ ದೋಣಿ ವಿಹಾರ ಪ್ರವಾಸಿಗರಿಗೆ ಖುಷಿ ಕೊಡುತ್ತದೆ. ಸರೋವರದ ನಡುವೆ ನಿರ್ಮಾಣವಾಗಿರುವ ಜಗಮಂದಿರದ ವಾಸ್ತುಕರೆ, ಶಿಲ್ಪಕಲೆ ಕೂಡ ಗಮನ ಸೆಳೆಯುತ್ತವೆ. ಜಲಮಹಲ್, ಲೇಕ್ ಪ್ಯಾಲೇಸ್, ದೋಣಿ ವಿಹಾರಗಳು ರೋಮಾಂಚನಗೊಳಿಸುತ್ತವೆ.

ಗಿಡ, ಮರಗಳಿಂದ ತುಂಬಿರುವ ಮೋತಿಮಗರೀ ಒಂದು ಪರ್ವತವಾಗಿದೆ. ಫತೇಹ್ ಸಾಗರ ಸರೋವರದ ದಡದಲ್ಲಿ ಈ ಪರ್ವತವಿದೆ. ಸುಂದರವಾದ ಸರೋವರವೆಂದೇ ಫತೇಹ್ ಸಾಗರ ಸರೋವರನ್ನು ಕರೆಯಲಾಗುತ್ತದೆ. ಆಕರ್ಷಕವಾದ ಹೂ, ಗಿಡ, ಬಳ್ಳಿ, ಮರ ಮೊದಲಾದವುಗಳಿಂದ ಕೂಡಿರುವ ಉದ್ಯಾನವನ ಇಲ್ಲಿದೆ.

ರಾಜಮಹಲ್, ಸಹೇಲಿಯೋಂಕಿ ಬಾಗ್, ಭಾರತೀಯ ಜಾನಪದ ಕಲಾ ಸಂಗ್ರಹ, ಸಿಟಿ ಪ್ಯಾಲೇಸ್ ಹೀಗೆ ಹಲವಾರು ನೋಡಬಹುದಾದ ಸ್ಥಳಗಳು ಉದಯಪುರದಲ್ಲಿವೆ. ಉದಯಪುರ ಸುತ್ತಮುತ್ತ ನಾಥದ್ವಾರ, ಶಿಲ್ಪಗ್ರಾಮ, ಕಾಂಕರೋಲಿ ಮೊದಲಾದ ನೋಡಬಹುದಾದ ಸ್ಥಳಗಳಿವೆ.

ಕರಕುಶಲ ವಸ್ತುಗಳು, ಮರದ ಬಣ್ಣದ ಆಟಿಕೆಗಳು, ಲೋಹದ ವಿಗ್ರಹಗಳು, ಪಾದರಕ್ಷೆ ಮೊದಲಾದ ವಸ್ತುಗಳನ್ನು ಖರೀದಿಸಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...