alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ಬುಕ್ ಸಾಕ್ಷ್ಯದಿಂದ ಬಾಲ್ಯ ವಿವಾಹ ಸಾಬೀತು ಮಾಡಿದ ಯುವತಿ

ರಾಜಸ್ತಾನದ ಯುವತಿಯೊಬ್ಳು ತನಗೆ ಬಾಲ್ಯವಿವಾಹ ಮಾಡಲಾಗಿತ್ತು ಎಂಬುದನ್ನು ಫೇಸ್ಬುಕ್ ನೆರವಿನಿಂದ ಕೋರ್ಟ್ ನಲ್ಲಿ ಸಾಬೀತು ಮಾಡಿದ್ದಾಳೆ. ಆಕೆಯ ಪತಿಯ ಫೇಸ್ಬುಕ್ ಪೇಜ್ ನಲ್ಲಿದ್ದ ವಿವರಗಳನ್ನು ಸಾಕ್ಷ್ಯವಾಗಿ ಕೋರ್ಟ್ ಗೆ ನೀಡಿದ್ದಾಳೆ.

ಸುಶೀಲಾ ಬಿಶ್ನೊಯ್ ಎಂಬ 19 ವರ್ಷದ ಯುವತಿಗೆ ಬಾಲ್ಯ ವಿವಾಹ ಮಾಡಲಾಗಿತ್ತು. ಅದರಿಂದ ಬಿಡುಗಡೆ ಕೋರಿ ಸುಶೀಲಾ ಕೋರ್ಟ್ ಮೆಟ್ಟಿಲೇರಿದ್ದಳು. ಆದ್ರೆ ಆಕೆಯ ಪತಿ ಮಾತ್ರ ತಮ್ಮಿಬ್ಬರಿಗೆ ಪ್ರಾಪ್ತ ವಯಸ್ಸಿನಲ್ಲೇ ಮದುವೆಯಾಗಿದೆ ಅಂತಾ ವಾದಿಸುತ್ತಿದ್ದ.

2010ರಲ್ಲಿ ಇಬ್ಬರಿಗೂ ವಿವಾಹ ಮಾಡಲಾಗಿತ್ತು. ಆಗ ಸುಶೀಲಾಗೆ ಕೇವಲ 12 ವರ್ಷ. ಆ ಸಮಯದಲ್ಲಿ ವರನಿಗೆ ಆತನ ಗೆಳೆಯರು ಫೇಸ್ಬುಕ್ ಮೂಲಕ ಶುಭ ಹಾರೈಸಿದ್ದರು. ಅದನ್ನೆಲ್ಲ ಸುಶೀಲಾ ಕೋರ್ಟ್ ಗೆ ಒಪ್ಪಿಸಿದ್ದಾಳೆ. ಕೋರ್ಟ್ ಕೂಡ ಬಾಲ್ಯ ವಿವಾಹ ನಡೆದಿದೆ ಅಂತಾ ಅಭಿಪ್ರಾಯಪಟ್ಟಿದ್ದು, ಮದುವೆಯನ್ನು ಅಸಿಂಧುಗೊಳಿಸಿ ತೀರ್ಪು ನೀಡಿದೆ.

ಸುಶೀಲಾಗೆ ಓದಬೇಕು ಅನ್ನೋ ಆಸೆಯಿತ್ತು. ಆದ್ರೆ 12ನೇ ವಯಸ್ಸಿನಲ್ಲೇ ಮದುವೆ ಮಾಡಿದ ಹೆತ್ತವರು ಗಂಡನ ಮನೆಗೆ ಹೋಗುವಂತೆ ಒತ್ತಡ ಹೇರಲಾರಂಭಿಸಿದ್ರು. ಬೇಸತ್ತ ಸುಶೀಲಾ ಮನೆ ಬಿಟ್ಟು ಓಡಿ ಬಂದಿದ್ಲು. ಅನಾಥಾಶ್ರಮವೊಂದರಲ್ಲಿ ಆಶ್ರಯ ಪಡೆದಿದ್ದ ಸುಶೀಲಾ, ಸಾಮಾಜಿಕ ಕಾರ್ಯಕರ್ತೆಯೊಬ್ಬರ ನೆರವಿನಿಂದ ಕಾನೂನು ಹೋರಾಟ ಮಾಡಿ, ಬಾಲ್ಯ ವಿವಾಹದಿಂದ ಮುಕ್ತಿ ಪಡೆದಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...