alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ವಿದ್ಯಾರ್ಥಿಯನ್ನು ಮನಬಂದಂತೆ ಥಳಿಸಿದ ಶಿಕ್ಷಕನ ವಿಡಿಯೋ

ರಾಜಸ್ಥಾನದ ದೌಶಾ ಜಿಲ್ಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿಯೊಬ್ಬನನ್ನು ಶಿಕ್ಷಕ ಮನಸೋ ಇಚ್ಚೆ ಥಳಿಸಿದ ಪರಿಣಾಮ ವಿದ್ಯಾರ್ಥಿ ಪ್ರಜ್ಞೆ ಕಳೆದುಕೊಂಡ ಘಟನೆ ನಡೆದಿದೆ. ಇದರಿಂದಾಗಿ ವಿದ್ಯಾರ್ಥಿಯ ಪೋಷಕರು ಶಿಕ್ಷಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕ್ಲಾಸಿಗೆ ತಡವಾಗಿ ಬಂದ ವಿದ್ಯಾರ್ಥಿಗೆ ಶಿಕ್ಷಕರು ಥಳಿಸಿರುವ ಈ ವಿಡಿಯೋ ಕೂಡ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.

ರಾಜಸ್ಥಾನದ ದೀದ್ವಾನಾ ಗ್ರಾಮದ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಈ ಘಟನೆ ನಡೆದಿದೆ. ಭೌತಶಾಸ್ತ್ರದ ಶಿಕ್ಷಕರಾಗಿರುವ ಜೈರಾಮ್ ಮೀನಾ ಎಂಬುವವರು ನೀರು ಕುಡಿದು ಕ್ಲಾಸಿಗೆ ಬಂದ ವಿದ್ಯಾರ್ಥಿಯೊಬ್ಬನಿಗೆ ಯಾಕೆ ತಡವಾಗಿ ಬಂದೆ ಅಂತ ನಿಂದಿಸುತ್ತಾ ಆತನನ್ನು ಹೊಡೆಯೋಕೆ ಶುರುಮಾಡಿದರು. ಆನಂತರದಲ್ಲಿ ವಿದ್ಯಾರ್ಥಿ ಪ್ರಜ್ಞೆ ಕಳೆದುಕೊಂಡ ಮೇಲೆ ಶಾಲೆಯ ಇತರೆ ವಿದ್ಯಾರ್ಥಿಗಳು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಆ ವಿದ್ಯಾರ್ಥಿ ತನ್ನ ಪೋಷಕರಿಗೆ ವಿಚಾರ ತಿಳಿಸಿದ್ದಾನೆ. ವಿದ್ಯಾರ್ಥಿಯ ಪೋಷಕರು ಶಿಕ್ಷಕನ ವಿರುದ್ಧ ಪೊಲೀಸ್ ಕಂಪ್ಲೇಟ್ ದಾಖಲಿಸಿದ್ದಾರೆ.

ದೂರು ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಶುರುಮಾಡಿದ್ದಾರೆ. ಈ ವಿಚಾರವನ್ನ ಸಹಾಯಕ ಜಿಲ್ಲಾ ಶಿಕ್ಷಣಾಧಿಕಾರಿಗಳ ಗಮನಕ್ಕೂ ತರಲಾಗಿದ್ದು, ಶಿಕ್ಷಕರಿಗೆ ಬೇರೆ ಶಾಲೆಗೆ ವರ್ಗಾಯಿಸೋಕೆ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...