alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ರಾಜಸ್ಥಾನ ಪೊಲೀಸರು ಮಾಡಿರುವ ಈ ಕೆಲಸ

ಆನ್ ಲೈನ್ ವಂಚಕರ ಬಗ್ಗೆ‌ ಜನರಲ್ಲಿ ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆ ಹಲವು ಮಾದರಿಯನ್ನು ಅನುಸರಿಸಿದೆ, ಆದರೆ ರಾಜಸ್ಥಾನ ಪೊಲೀಸರು ಅನುಸರಿಸಿದ ಈ ಮಾದರಿ ಇದೀಗ ವೈರಲ್ ಆಗಿದೆ.

ಹೌದು, ಆನ್ ಲೈನ್‌ ವಂಚನೆ ಬಗ್ಗೆ ಜನರಲ್ಲಿ ರಾಜಸ್ಥಾನ ಪೊಲೀಸರು ಅಮೀರ್ ಖಾನ್ ಹಾಗೂ ಅಮಿತಾಬ್ ಬಚ್ಚನ್ ನಟನೆಯ ‘ಥಗ್ಸ್ ಆಫ್ ಹಿಂದೂಸ್ತಾನ‌’ ಚಿತ್ರ ಪೋಸ್ಟರ್ ಬಳಸಿಕೊಂಡಿದ್ದು, ಯಾರಾದರೂ ವಂಚನೆಗೆ ಸಿಲುಕಿದ್ದರೆ ಕೂಡಲೇ ಪೊಲೀಸ್ ಠಾಣೆಗೆ ಭೇಟಿ ನೀಡುವಂತೆ ಸಲಹೆ ನೀಡಿದ್ದಾರೆ.

ರಾಜಸ್ಥಾನ ಪೊಲೀಸರ ಮಾಡಿರುವ ಟ್ವೀಟ್ ನಲ್ಲಿ, ಆನ್ ಲೈನ್ ವಂಚಕರನ್ನು ಪತ್ತೆ ಹಚ್ಚುವುದು ಪ್ರತಿಯೊಬ್ಬರ ಕರ್ತವ್ಯ. ಆದ್ದರಿಂದ ಯಾರಾದರೂ ವಂಚನೆಗೆ ಒಳಗಾದರೆ ಸ್ಥಳೀಯ‌ ಪೊಲೀಸ್ ಠಾಣೆ ಅಥವಾ 100ಕ್ಕೆ ಕರೆಮಾಡುವಂತೆ ಮನವಿ ಮಾಡಿದ್ದಾರೆ.

ಪೊಲೀಸರ ಈ ವಿನೂತನ ಜಾಗೃತಿ‌ ಅಭಿಯಾನಕ್ಕೆ, ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಹಾಕಿದ ಕೆಲ ಗಂಟೆಯಲ್ಲಿಯೇ ಸಾವಿರಾರು‌ ಲೈಕ್,‌ ಕಾಮೆಂಟ್ ಹಾಗೂ ಶೇರ್ ಗಳಾಗಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...