alex Certify
ಕನ್ನಡ ದುನಿಯಾ       Mobile App
       

Kannada Duniya

ಜೆಎನ್‌‌ಯುನಲ್ಲಿ ಪ್ರತಿದಿನ ಸಿಗುತ್ತಂತೆ 3 ಸಾವಿರ ಬಳಸಿದ ಕಾಂಡೋಮ್ ಗಳು !!

bjp-mla-said-alwar-ex-district-chief-had-relations-with-militants-23895_1456203753

ದೇಶ ವಿರೋಧಿ ಹೇಳಿಕೆಯ ಮೂಲಕ ಸುದ್ದಿಯಾಗಿದ್ದ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದ್ದು, ಪ್ರತಿ ನಿತ್ಯ ಮೂರು ಸಾವಿರಕ್ಕೂ ಅಧಿಕ ಕಾಂಡೋಮ್ ಗಳು ಪತ್ತೆಯಾಗುತ್ತಿವೆ ಎಂದು ಬಿಜೆಪಿ ಶಾಸಕರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.

ಹೌದು. ರಾಜಸ್ಥಾನದ ಬಿಜೆಪಿ ಶಾಸಕ ಜ್ಞಾನದೇವ್ ಅಹುಜಾ ಅವರು ಮಾತನಾಡಿ, ಜವಾಹರ್‌ ಲಾಲ್‌ ನೆಹರು ವಿಶ್ವವಿದ್ಯಾಲಯ ಮೊದಲಿನಂತೆ ತನ್ನ ಘನತೆ ಉಳಿಸಿಕೊಂಡಿಲ್ಲ. ಬದಲಾಗಿ ಇದು ದೇಶ ವಿರೋಧಿಗಳ ತಾಣವಾಗುತ್ತಿದ್ದು, ಪ್ರತಿ ದಿನವೂ ಸಂಜೆ 8 ಗಂಟೆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಹೆಸರಲ್ಲಿ ನಗ್ನ ನೃತ್ಯ ಮಾಡುತ್ತಾರೆ. ಅಲ್ಲದೇ ದಿನವೂ ವಿವಿ ಯಲ್ಲಿ 3 ಸಾವಿರ ಬಳಕೆಯಾದ ಕಾಂಡೋಮ್‌ ಗಳು ಹಾಗೂ 500 ಗರ್ಭ ನಿರೋಧಕ ಇಂಜೆಕ್ಷನ್‌‌ಗಳು ಪತ್ತೆಯಾಗುತ್ತಿರುವುದು ಇಲ್ಲಿನ ಪರಿಸ್ಥಿತಿಯನ್ನು ತೆರೆದಿಡುತ್ತಿದೆ ಎಂದಿದ್ದಾರೆ.

ಅಷ್ಟೇ ಅಲ್ಲ, ಕ್ಯಾಂಪಸ್‌ನಲ್ಲಿ ದೇಶ ವಿರೋಧಿ ಘೋಷಣೆ ಕೂಗಿದ ದೇಶದ್ರೋಹಿ ಆರೋಪಿಗಳನ್ನು ಬೆಂಬಲಿಸುವವರು ಈ ದೇಶದಲ್ಲಿ ವಾಸಿಸಲು ಯೋಗ್ಯರಲ್ಲ ಎಂದು ಕಾಂಗ್ರೆಸ್‌‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಹರಿಹಾಯ್ದಿರುವ ಶಾಸಕ ಜ್ಞಾನದೇವ್, ಜ್ಞಾನ ದೇಗುಲವಾಗಬೇಕಿದ್ದ ಈ ವಿವಿಯಲ್ಲಿ ಇದೀಗ ಅನೈತಿಕ ಚಟುವಟಿಕೆಗಳೇ ತಾಂಡವವಾಡುತ್ತಿದ್ದು ಪ್ರತಿದಿನ 50 ಸಾವಿರದಷ್ಟು ಮೂಳೆ ತುಂಡುಗಳು, 3 ಸಾವಿರ ಬೀರ್‌ ಕ್ಯಾನ್‌ಗಳು, 10 ಸಾವಿರಕ್ಕೂ ಹೆಚ್ಚು ಸಿಗರೇಟು ತುಂಡುಗಳು ಸಿಗುತ್ತಿದ್ದು, ಇಲ್ಲಿ ನಿಜವಾಗಿ ಏನು ನಡೆಯುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...