alex Certify
ಕನ್ನಡ ದುನಿಯಾ       Mobile App
       

Kannada Duniya

ತೈಲ ಬೆಲೆಯಿಂದ ಬಚಾವಾಗಲು ಸಚಿವರು ನೀಡಿದ್ರು ಇಂತಹ ‘ಸಲಹೆ’

ತೈಲದ ದರ ದಿನೇ ದಿನೇ ಏರುತ್ತಲೇ ಇದೆ ಎಂದು ಜನ ಆಕ್ರೋಶ ಹೊರ ಹಾಕುತ್ತಿದ್ದಾರೆ. ಕಿಸೆಗೆ ಭಾರವಾಗಿರುವ ತೈಲದಿಂದ ಬಚಾವಾಗುವ ಐಡಿಯಾವೊಂದು ರಾಜಸ್ಥಾನ ಸಚಿವರಿಗೆ ಹೊಳೆದಿದೆ. ಅದೇನು ಗೊತ್ತಾ?  “ಜನರು ಇತರೆ ವೆಚ್ಚಗಳನ್ನು ಕಡಿಮೆ ಮಾಡಬೇಕು. ಆಗ ಖರ್ಚು ತಗ್ಗುತ್ತದೆ”.

ಈ ಅದ್ಭುತ ಐಡಿಯಾ ನೀಡಿದವರು ರಾಜಸ್ಥಾನದ ಸಚಿವ ರಾಜ್‌ಕುಮಾರ್ ರಿನ್ವಾ. ಅವರ ಪ್ರಕಾರ, ಇಂಧನ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯ ಕಚ್ಚಾ ತೈಲ ಬೆಲೆಯೊಂದಿಗೆ ಸಂಬಂಧಿಸಿದೆ. ಕಚ್ಚಾ ತೈಲದ ಬೆಲೆ ಹೆಚ್ಚಾಗಿದೆ ಎಂದರೆ ಜನರಿಗೆ ಅರ್ಥವಾಗುವುದಿಲ್ಲ. ಅವರು ತಮ್ಮ ಇತರೆ ವೆಚ್ಚಗಳನ್ನು ತಗ್ಗಿಸಬೇಕು ಎಂದಿದ್ದಾರೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ವಿರುದ್ಧ ಕಾಂಗ್ರೆಸ್ ನೇತೃತ್ವದಲ್ಲಿ ವಿಪಕ್ಷಗಳು ಭಾರತ್ ಬಂದ್‌ಗೆ ಕರೆ ನೀಡಿರುವ ದಿನವೇ ಈ ಅಸಂಬದ್ಧ ಹೇಳಿಕೆ ಹೊರಬಿದ್ದಿದೆ. ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್, ಇಂತಹ ಹೇಳಿಕೆಗಳ ಮೂಲಕ ಬಿಜೆಪಿ ನಾಯಕತ್ವ ತನ್ನ ಅಹಂಕಾರವನ್ನು ಪ್ರದರ್ಶಿಸುತ್ತಿದೆ. ಜನರ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳುವ ಸಂವೇದನಾಶೀಲತೆಯೇ ಅವರಿಗಿಲ್ಲ ಎಂದು ಕಿಡಿ ಕಾರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...