alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿ ವಿರುದ್ದ ದೂರು ನೀಡಿದ್ಲು ಒಂಭತ್ತನೇ ಪತ್ನಿ

ವಿವಾಹವಾಗಿ ಮಹಿಳೆಯರನ್ನು ವಂಚಿಸುತ್ತಿದ್ದವನೊಬ್ಬನ ವಿರುದ್ದ ಆತನ ಒಂಭತ್ತನೇ ಪತ್ನಿ ಎಂದು ಹೇಳಿಕೊಂಡಿರುವ ಮಹಿಳೆ, ಪೊಲೀಸರಿಗೆ ದೂರು ನೀಡಿದ ವೇಳೆ ಬಂಧನಕ್ಕೊಳಗಾಗಿದ್ದಾನೆ.

ರಾಜಸ್ತಾನ ಮೂಲದ 38 ವರ್ಷದ ಸಲೀಂ ಖಾನ್ ಬಂಧನಕ್ಕೊಳಗಾದವನಾಗಿದ್ದು, ಈತ ಲಕ್ನೋದ ಮಹಿಳೆಯೊಂದಿಗೆ ಕೆಲ ವರ್ಷಗಳ ಹಿಂದೆ ವಿವಾಹವಾಗಿದ್ದನೆನ್ನಲಾಗಿದೆ. ವಿವಾಹವಾಗಿದ್ದರೂ ಸಲೀಂ ಖಾನ್ ಕೆಲ ಮಹಿಳೆಯರೊಂದಿಗೆ ಸಂಪರ್ಕ ಹೊಂದಿದ್ದು, ಇದು ಅರಿವಿಗೆ ಬರುತ್ತಲೇ ಆತನೊಂದಿಗೆ ವಾಸವಾಗಿದ್ದ ಪತ್ನಿ ಮಾಹಿತಿ ಕಲೆ ಹಾಕಲು ಆರಂಭಿಸಿದ್ದಾಳೆ.

ಈ ಸಂದರ್ಭದಲ್ಲಿ ಸಲೀಂ ಖಾನ್ ಈಗಾಗಲೇ ಹಲವು ವಿವಾಹವಾಗಿರುವ ಸಂಗತಿ ಬಹಿರಂಗವಾಗಿದ್ದು, ಈಗ ಪೊಲೀಸರಿಗೆ ದೂರು ನೀಡಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ ವೇಳೆ ಆತನ ಮೂರು ವಿವಾಹಗಳ ಮಾಹಿತಿ ಹೊರ ಬಿದ್ದಿದೆ. ದೂರು ನೀಡಿದ ಮಹಿಳೆ ಆರೋಪಿಸಿರುವಂತೆ ಈತ ಇನ್ನೂ ಹಲವು ವಿವಾಹವಾಗಿದ್ದಾನೆಯೇ ಎಂಬುದುರ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...