alex Certify
ಕನ್ನಡ ದುನಿಯಾ       Mobile App
       

Kannada Duniya

ಬಹಿರ್ದೆಸೆಗೆ ಹೋದ ಮಹಿಳೆಯ ಫೋಟೋ ತೆಗೆದರು

raj-po

ಸ್ವಚ್ಛ ಭಾರತ ಅಭಿಯಾನದ ಹೆಸರಲ್ಲಿ ಅಧಿಕಾರಿಗಳು ರಾಕ್ಷಸರಂತೆ ವರ್ತಿಸಿದ ಘಟನೆ ರಾಜಸ್ತಾನದ ಪ್ರತಾಪ್ ಗಡದಲ್ಲಿ ನಡೆದಿದೆ.

ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು ಹಾಗೂ ಸಿಬ್ಬಂದಿ ಬಯಲು ಶೌಚ ಮುಕ್ತವಾಗಿಸಲು ಅಭಿಯಾನ ಕೈಗೊಂಡಿದ್ದು, ಈ ಸಂದರ್ಭದಲ್ಲಿ ಬಹಿರ್ದೆಸೆಗೆ ತೆರಳಿದ್ದ ಮಹಿಳೆಯರ ಫೋಟೋ ತೆಗೆದಿದ್ದಾರೆ.

ಇದನ್ನು ಸ್ಥಳೀಯ ನಿವಾಸಿ ಜಾಫರ್ ಪ್ರಶ್ನಿಸಿದ್ದು, ಹೆಣ್ಣುಮಕ್ಕಳು ಶೌಚ ಮಾಡುವಾಗ ಫೋಟೋ ತೆಗೆಯದಂತೆ ಆಕ್ಷೇಪಿಸಿ, ಅಧಿಕಾರಿಗಳೊಂದಿಗೆ ಜಗಳವಾಡಿದ್ದಾನೆ.

ಅಧಿಕಾರಿಗಳು ಜಾಫರ್ ನನ್ನು ಅಲ್ಲಿಯೇ ಥಳಿಸಿ ಕೊಂದಿದ್ದಾರೆ. ಹಲ್ಲೆ ಮಾಡಿದ ಮೂವರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

ಮಹಿಳೆಯರು ಬಹಿರ್ದೆಸೆಗೆ ತೆರಳಿದಾಗ ಫೋಟೋ ತೆಗೆದಿದ್ದಲ್ಲದೇ, ಹಲ್ಲೆ ನಡೆಸಿ ಜಾಫರ್ ನನ್ನು ಕೊಂದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸ್ಥಳೀಯ ನಿವಾಸಿಗಳು ರಸ್ತೆತಡೆ ನಡೆಸಿದ್ದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.

ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ಪರಿಸ್ಥಿತಿ ತಿಳಿಗೊಳಿಸಲಾಗಿದೆ ಎಂದು ಎಸ್.ಪಿ. ಶಿವರಾಜ್ ಮೀನಾ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...