alex Certify
ಕನ್ನಡ ದುನಿಯಾ       Mobile App
       

Kannada Duniya

ವ್ಯಕ್ತಿಯ ಜೀವ ಉಳಿಸಿದೆ ಶಾಸಕರ ಪೇಟಾ…!

ರಾಜಸ್ಥಾನದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ. ರಾಜಸ್ಥಾನದ ಕತುಮಾರ ಕ್ಷೇತ್ರದ ಶಾಸಕರ ಸಮಯ ಪ್ರಜ್ಞೆಯಿಂದ ಓರ್ವನ ಜೀವ ಉಳಿದಿದೆ.

50 ವರ್ಷದ ಕಿಶೋರ್ ಲಾಲಾ ಮೀನಾ ಎಂಬವರು ಇಮ್ಲಿ ಫಾಟಕ್ ಬಳಿ ಸೇತುವೆ ದಾಟಲು ಮುಂದಾಗಿದ್ದರು. ಸೇತುವೆ ಮೇಲೆ ನೀರು ಹರಿಯುತ್ತಿದ್ದು, ನೀರಿನ ಸೆಳೆತಕ್ಕೆ ಬೈಕ್ ಹಾಗೂ ಕಿಶೋರ್ ಸಿಕ್ಕಿಕೊಂಡಿದ್ದಾರೆ. ಈ ವೇಳೆ ಅವರು ಸಹಾಯಕ್ಕೆ ಕೂಗಿಕೊಂಡಿದ್ದಾರೆ.

ಅದೇ ಮಾರ್ಗವಾಗಿ ಹೋಗುತ್ತಿದ್ದ ಬಿಜೆಪಿ ಶಾಸಕ ಮಂಗಲ್ ರಾಮ್ ಗೆ ಇವರ ಆಕ್ರಂದನ ಕೇಳಿದೆ. ಕೂಡಲೇ ಅವರು ತಮ್ಮ ಸೆಕ್ಯೂರಿಟಿಯೊಂದಿಗೆ ಸ್ಥಳಕ್ಕೆ ಬಂದಿದ್ದು, ತಾವು ತಲೆಗೆ ಸುತ್ತಿಕೊಂಡಿದ್ದ ಪೇಟಾವನ್ನು ಕಿಶೋರ್ ರತ್ತ ಎಸೆದಿದ್ದಾರೆ. ಕಿಶೋರ್ ಅದನ್ನು ಹಿಡಿದುಕೊಂಡ ವೇಳೆ ಶಾಸಕರು ಮತ್ತವರ ಸೆಕ್ಯೂರಿಟಿ ಸಿಬ್ಬಂದಿ ಸುರಕ್ಷಿತ ಸ್ಥಳಕ್ಕೆ ಎಳೆದುಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...