alex Certify
ಕನ್ನಡ ದುನಿಯಾ       Mobile App
       

Kannada Duniya

ತಂದೆಯ ಅಂತ್ಯಸಂಸ್ಕಾರ ನೆರವೇರಿಸಿದ ಹೆಣ್ಣು ಮಕ್ಕಳಿಗೆ ಬಹಿಷ್ಕಾರ

ಗಂಡು ಸಂತಾನವಿಲ್ಲದ ತಂದೆಯ ಅಂತ್ಯಸಂಸ್ಕಾರವನ್ನು ಹೆಣ್ಣು ಮಕ್ಕಳು ನಿರ್ವಹಿಸಿದ ಕಾರಣಕ್ಕಾಗಿ ಅವರನ್ನು ಗ್ರಾಮದಿಂದಲೇ ಬಹಿಷ್ಕಾರ ಹಾಕಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ರಾಜಸ್ಥಾನದ ಬುಂದಿ ಜಿಲ್ಲೆಯ ಬರ್ಲಿಯ ರೇಜರ್ ಕಾಲೋನಿಯಲ್ಲಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದ 58 ವರ್ಷದ ದುರ್ಗಾಶಂಕರ್ ಇತ್ತೀಚೆಗಷ್ಟೇ ಸಾವನ್ನಪ್ಪಿದ್ರು.

ಗಂಡು ಮಕ್ಕಳಿಲ್ಲದ ಕಾರಣ ತನ್ನ ನಾಲ್ವರು ಹೆಣ್ಣು ಮಕ್ಕಳೇ ತನ್ನ ಅಂತ್ಯಸಂಸ್ಕಾರವನ್ನು ನೆರವೇರಿಸಬೇಕು ಅನ್ನೋದು ಅವರ ಆಸೆಯಾಗಿತ್ತು. ಆ ಪ್ರಕಾರ ನಾಲ್ವರು ಪುತ್ರಿಯರು ತಂದೆಯ ಅಂತಿಮ ವಿಧಿವಿಧಾನಗಳನ್ನ ನಡೆಸೋಕೆ ಮುಂದಾದ್ರು. ಈ ವೇಳೆ ಗ್ರಾಮದ ಪಂಚಾಯ್ತಿ ಪ್ರಮುಖರು ಈ ಕಾರ್ಯ ನೆರವೇರಿಸದಂತೆ ಹೆಣ್ಣು ಮಕ್ಕಳಿಗೆ ಸೂಚಿಸಿದ್ರು. ಒಂದು ವೇಳೆ ಸೂಚನೆಯನ್ನು ಮೀರಿ ನಡೆದುಕೊಂಡಿದ್ದೇ ಆದ್ರೆ ಗ್ರಾಮದಿಂದ ಮತ್ತು ಸಮುದಾಯದಿಂದ ಬಹಿಷ್ಕಾರ ಹಾಕುವುದಾಗಿ ಎಚ್ಚರಿಕೆ ನೀಡಿದ್ರು.

ಇದರಿಂದಾಗಿ ದುರ್ಗಾಶಂಕರ್ ಅವರ ಬಂಧುಗಳು ಕೂಡ ಅಂತಿಮ ಸಂಸ್ಕಾರದಿಂದ ಹಿಂದೆ ಸರಿದುಬಿಟ್ಟರು. ಪಂಚಾಯ್ತಿ ಪ್ರಮುಖರ ಸೂಚನೆಗಳನ್ನು ಮೀರಿ ನಾಲ್ವರು ಹೆಣ್ಣುಮಕ್ಕಳು ತಂದೆಯ ಅಂತ್ಯಸಂಸ್ಕಾರವನ್ನು ಮುಗಿಸಿ ವಾಪಸ್ಸು ಗ್ರಾಮಕ್ಕೆ ಬಂದಾಗ ಇಡೀ ಗ್ರಾಮ ಅವರನ್ನು ಬಹಿಷ್ಕರಿಸಿತ್ತು. ಅವರಿಗೆ ಸ್ನಾನಕ್ಕೆ ನೀರನ್ನಾಗ್ಲಿ ಅಥವಾ ಊಟವನ್ನಾಗ್ಲಿ ಕೊಡಲಿಲ್ಲ. ಅಂತ್ಯಸಂಸ್ಕಾರದ ಕೊಠಡಿಯಲ್ಲಿ ನಾಲ್ವರು ಹೆಣ್ಣು ಮಕ್ಕಳನ್ನು ಲಾಕ್ ಮಾಡಿ ಇಡೀ ಗ್ರಾಮವೇ ಸೂತಕದ ಸ್ನಾನ ಮಾಡಿದೆಯಂತೆ.

ಆದ್ರೆ ಸಮುದಾಯ ಮುಖ್ಯಸ್ಥ ಚಂದುಲಾಲ್ ಚಂಡೇಲಿಯಾ ಈ ಆರೋಪವನ್ನ ಅಲ್ಲಗಳೆಯುತ್ತಾರೆ. ಗ್ರಾಮದಿಂದಾಗ್ಲಿ ಅಥವಾ ಸಮುದಾಯದಿಂದಾಗ್ಲಿ ಯಾರನ್ನು ಬಹಿಷ್ಕರಿಸಿಲ್ಲ. ಕೆಲ ಕಿಡಿಗೇಡಿಗಳು ಹೀಗೆ ಇಲ್ಲಸಲ್ಲದ ಸುದ್ದಿಯನ್ನ ಹರಡಿದ್ದಾರೆ ಅಂತ ಹೇಳ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...