alex Certify
ಕನ್ನಡ ದುನಿಯಾ       Mobile App
       

Kannada Duniya

83 ರ ವರ, 30 ರ ವಧು: ಅದ್ಧೂರಿಯಾಗಿ ನಡೀತು ಮದುವೆ ಸಮಾರಂಭ…!

ರಾಜಸ್ತಾನದ ಕರೌಲಿಯಲ್ಲಿ ನಡೆದ ಮದುವೆಯೊಂದು ಎಲ್ಲರ ಗಮನ ಸೆಳೆದಿದೆ. 83 ವರ್ಷದ ವೃದ್ಧನ ಮದುವೆ ಅದ್ಧೂರಿಯಾಗಿ ನಡೆದಿದೆ. ವೃದ್ದನ ಮೊದಲ ಪತ್ನಿ ಎದುರಲ್ಲೇ ಎರಡನೇ ಮದುವೆ ನಡೆದದ್ದು ಒಂದು ವಿಶೇಷವಾದ್ರೆ 83ರ ಅಜ್ಜ ಮದುವೆಯಾಗಿದ್ದು 30ರ ಯುವತಿಯನ್ನು ಎನ್ನುವುದು ಇನ್ನೂ ಆಶ್ಚರ್ಯಕರ ವಿಚಾರ.

ಕರೌಲಿ ಜಿಲ್ಲೆಯ ಸೌಮರದಾ ನಿವಾಸಿ ಸುಖಾರಾಮ್ ತನ್ನ 83ನೇ ವಯಸ್ಸಿನಲ್ಲಿ ವರನಾಗಿದ್ದಾನೆ. ತನಗಿಂತ 53 ವರ್ಷ ಚಿಕ್ಕ ಹುಡುಗಿಯನ್ನು ಮದುವೆಯಾಗಿದ್ದಾನೆ. ಗ್ರಾಮದ ಮುಖ್ಯಸ್ಥರು ಸೇರಿದತೆ ಸುಖಾರಾಮ್ ಮೊದಲ ಪತ್ನಿ ಹಾಗೂ ಇಬ್ಬರು ಮಕ್ಕಳು ಮೆರವಣಿಗೆ ವೇಳೆ ಡಾನ್ಸ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ಹಿಂದೂ ಪದ್ಧತಿಯಂತೆ ಮದುವೆ ನೆರವೇರಿದೆ. ಸುಖಾರಾಮ್ ಅಕ್ಕಪಕ್ಕದ ಐದು ಗ್ರಾಮಗಳಿಗೆ ಮದುವೆಗೆ ಆಹ್ವಾನ ನೀಡಿದ್ದ. ಸುಖಾರಾಮ್ ಗೆ ಇಬ್ಬರು ಪುತ್ರಿಯರು. ಪುತ್ರ 30 ವರ್ಷದಲ್ಲಿಯೇ ಸಾವನ್ನಪ್ಪಿದ್ದ. ಸುಖಾರಾಮ್ ಮದುವೆಯಾದ ಯುವತಿ ಮಾನಸಿಕ ಅಸ್ವಸ್ಥೆ ಎನ್ನಲಾಗಿದೆ. ಆಕೆಗೂ ಸಹೋದರಿಯರಿದ್ದು ಅವರೆಲ್ಲರಿಗೂ ಮದುವೆಯಾಗಿದೆ. ಸುಖಾರಾಮ್ ಶ್ರೀಮಂತನಾಗಿದ್ದು, ದೆಹಲಿಯಲ್ಲೂ ಆಸ್ತಿಯಿದೆಯಂತೆ. ಬಡ ಹುಡುಗಿಗೆ ಬಾಳು ನೀಡಲು ಸುಖಾರಾಮ್ ಇನ್ನೊಂದು ಮದುವೆಯಾಗಿದ್ದಾನೆ. ಇದಕ್ಕೆ ಮೊದಲ ಪತ್ನಿ ಕೂಡ ಒಪ್ಪಿಗೆ ನೀಡಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...