alex Certify
ಕನ್ನಡ ದುನಿಯಾ       Mobile App
       

Kannada Duniya

40 ದಿನ ಮಗಳ ಶವವನ್ನು ಮನೆಯಲ್ಲೇ ಇರಿಸಿದ ಹೆತ್ತವರು, ಕಾರಣ ಕೇಳಿದ್ರೆ….

ರಾಜಸ್ತಾನದ ಸವಾಯಿ ಮಾಧೋಪುರ ಜಿಲ್ಲೆಯಲ್ಲಿ ಮಹಿಳೆಯೊಬ್ಬಳ ಶವವನ್ನು 40 ದಿನಗಳ ಕಾಲ ಮನೆಯಲ್ಲೇ ಇಟ್ಟುಕೊಂಡಿದ್ದ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ 35 ವರ್ಷದ ಅನಿತಾ ಸಿಂಗ್ ಜನವರಿ 14ರಂದು ಮೃತಪಟ್ಟಿದ್ದಳು. ಆಕೆ ಮತ್ತೆ ಬದುಕಿ ಬರ್ತಾಳೆ, ಅವಳ ಶವವನ್ನು ಮನೆಯಲ್ಲೇ ಇಡಿ ಅಂತಾ ಮಾಂತ್ರಿಕನೊಬ್ಬ ಹೇಳಿದ್ದ. ಬದುಕಿದ್ದಾಗಿಯೂ ಅನಿತಾ ಸಿಂಗ್ ದೇವಮಾತೆಯೆಂದೇ ಆತ ನಂಬಿಸಿದ್ದ. ಹೋಳಿ ಸಮಯದಲ್ಲಿ ಅನಿತಾಳನ್ನು ಮತ್ತೆ ಬದುಕಿಸಲು ವಿಶೇಷ ಪೂಜೆ ಮಾಡಲು ಹೆತ್ತವರು ನಿರ್ಧರಿಸಿದ್ರು.

ಹಾಗಾಗಿ ಅನಿತಾ ಸತ್ತಿರೋ ವಿಚಾರವನ್ನು ಬಹಿರಂಗಪಡಿಸಿರಲಿಲ್ಲ. ಶವವನ್ನು ಮನೆಯಲ್ಲೇ ಇರಿಸಿಕೊಂಡಿದ್ರು. ಕಿರಿಯ ಮಗಳು ಮೋಹಿನಿ ಯಾರಿಗಾದ್ರೂ ವಿಷಯ ತಿಳಿಸಿಬಿಡಬಹುದು ಅನ್ನೋ ಭಯದಲ್ಲಿ ಅವಳನ್ನು ಮನೆಯಿಂದ ಹೊರಹೋಗಲು ಬಿಟ್ಟಿರಲಿಲ್ಲ.

ಹೇಗೋ ತಪ್ಪಿಸಿಕೊಂಡು ಬಂದ ಮೋಹಿನಿ ತನ್ನ ಸಹೋದರರಿಗೆ ಮಾಹಿತಿ ನೀಡಿದ್ಲು. ನಂತರ ಪೊಲೀಸರಿಗೆ ವಿಷಯ ಮುಟ್ಟಿಸಲಾಯ್ತು. 6 ಜನರನ್ನು ಬಂಧಿಸಿದ್ದು, ಮಾಂತ್ರಿಕ ತಲೆಮರೆಸಿಕೊಂಡಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...