alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಪಿಎಲ್ ಕಾರ್ಡ್ ಮಹಿಳೆಯರಿಗೆ ಸಿಗಲಿದೆ ಫ್ರೀ ಮೊಬೈಲ್

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವ್ರ ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ ರಾಜಸ್ಥಾನದ ವಸುಂಧರಾ ರಾಜೆ ಸರ್ಕಾರ ಬೆಂಬಲ ನೀಡ್ತಿದೆ. ಡಿಜಿಟಲ್ ಇಂಡಿಯಾ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರಿಗೆ ಉಚಿತವಾಗಿ ಮೊಬೈಲ್ ನೀಡಲು ಮುಂದಾಗಿದೆ. ಸರ್ಕಾರ ಬಾಮಾಶಾ ಯೋಜನೆಯಡಿ ಮಹಿಳೆಯರಿಗೆ ಮೊಬೈಲ್ ವಿತರಣೆ ಮಾಡಲಿದೆ.

ಆರ್ಥಿಕ ಹಾಗೂ ಹಣಕಾಸೇತರ ಯೋಜನೆಗಳನ್ನು ರಾಜ್ಯದ ಜನತೆಗೆ ತಲುಪಿಸುವ ಉದ್ದೇಶ ರಾಜ್ಯ ಸರ್ಕಾರದ್ದು. ಮೊಬೈಲ್ ಬಟನ್ ಒತ್ತಿ ಸರ್ಕಾರಿ ಯೋಜನೆಗಳ ಲಾಭ ಪಡೆಯಬಹುದೆಂದು ವಸುಂಧರಾ ರಾಜೆ ಸರ್ಕಾರ ಹೇಳಿದೆ. ಇದಕ್ಕಾಗಿ ಸರ್ಕಾರ, ಮೊಬೈಲ್ ಅಪ್ಲಿಕೇಷನ್ ಸಿದ್ಧಪಡಿಸುತ್ತಿದೆ.

ಮುಂದಿನ ದಿನಗಳಲ್ಲಿ ರಾಜಸ್ಥಾನ ಸರ್ಕಾರ 5000 ಗ್ರಾಮಗಳಿಗೆ ಉಚಿತವಾಗಿ ವೈಫೈ ಸೌಲಭ್ಯ ನೀಡಲಿದೆಯಂತೆ. ಡಿಜಿಟಲ್ ಇಂಡಿಯಾಕ್ಕೆ ಪ್ರೋತ್ಸಾಹ ನೀಡಲು ಸರ್ಕಾರ ತೆಗೆದುಕೊಂಡ ಮೊದಲ ಕಾರ್ಯಕ್ರಮ ಇದಲ್ಲ. ವಸುಂಧರಾ ರಾಜೆ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...