alex Certify
ಕನ್ನಡ ದುನಿಯಾ       Mobile App
       

Kannada Duniya

10 ನೇ ವಯಸ್ಸಿನಲ್ಲೇ ಪುಟ್ಟ ಬಾಲೆಯ ಅದ್ಬುತ ಸಾಧನೆ

ಈಕೆಯ ವಯಸ್ಸಿನ ಮಕ್ಕಳೆಲ್ಲಾ ಮೊಬೈಲ್ ಗೇಮ್ಸ್ ಆಡುತ್ತಾ, ಕಾರ್ಟೂನ್ ನೋಡುತ್ತಾ ಅಥವಾ ಶಾಲೆಯ ಮಣ ತೂಕದ ಅಸೈನ್‌ಮೆಂಟ್ ಹೊರೆ ಹೊತ್ತು ಕುಳಿತಿದ್ದರೆ, ಇವಳ ಸಾಧನೆಯೇ ಭಿನ್ನ. 10 ವರ್ಷದ ಮನಸ್ವಿ ಭರತನಾಟ್ಯ ರಂಗಪ್ರವೇಶ ಮಾಡುವ ಮೂಲಕ ಜಗತ್ತಿನ ಎರಡನೇ ಅತಿ ಕಿರಿಯ ಸಾಧಕಿ ಎನಿಸಿಕೊಂಡಿದ್ದಾಳೆ.

ಭಾರತದ ಶಾಸ್ತ್ರೀಯ ನೃತ್ಯ ಪ್ರಕಾರವಾಗಿರುವ ಭರತನಾಟ್ಯದಲ್ಲಿ ರಂಗಪ್ರವೇಶ ಎಂಬುದು ಗುರುವಿನ ಅನುಮತಿಯೊಂದಿಗೆ ವೇದಿಕೆಯೇರುವ ಕ್ಷಣವಾಗಿದೆ. ನೃತ್ಯ ಅಭ್ಯಾಸಿಯ ತರಬೇತಿ ಪೂರ್ಣಗೊಂಡಿದ್ದು, ಆಕೆಯೀಗ ತನ್ನ ಕೌಶಲ್ಯವನ್ನು ಇತರರಿಗೆ ಪ್ರದರ್ಶಿಸಲು ಸಿದ್ಧಳಿದ್ದಾಳೆ ಎಂಬುದನ್ನು ಸಾರುವ ಸಂದರ್ಭವಾಗಿದೆ.

ಗುರು ಮಂಜೂಷಾ ಸಕ್ಸೇನಾ ಅವರ ಮಾರ್ಗದರ್ಶನದಲ್ಲಿ ನೃತ್ಯಾಭ್ಯಾಸ ಮಾಡಿದ್ದ ರಾಜಸ್ಥಾನದ ಮನಸ್ವಿ, ರಂಗಪ್ರವೇಶದ ದಿನ 9 ಬಗೆಯ ನೃತ್ಯ ಪ್ರದರ್ಶಿಸಿದ್ದಾಳೆ. ಪುಟ್ಟ ಬಾಲಕಿಯ ನೃತ್ಯವನ್ನು ಕಣ್ತುಂಬಿಕೊಳ್ಳಲು ಜೋಧ್‌ಪುರದ ಅಡಿಟೋರಿಯಂ ಪ್ರೇಕ್ಷಕರಿಂದ ತುಂಬಿ ತುಳುಕಿತ್ತು. ಕೇವಲ 5ನೇ ವಯಸ್ಸಿಗೆ ವೇದಿಕೆಯೇರಿದ್ದ ವಿಶಾಖಪಟ್ಟಂನ ಬಾಲೆ ಸಾಯಿ ಶ್ರಿಯಾ ಸತುಲಾರಿ ಜಗತ್ತಿನಲ್ಲೇ ಅತಿ ಕಿರಿಯ ವಯಸ್ಸಲ್ಲಿ ರಂಗಪ್ರವೇಶ ಮಾಡಿದ ದಾಖಲೆ ಹೊಂದಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...