
ಜೈಪುರದಲ್ಲಿ 12 ವರ್ಷದ ಬಾಲಕಿಯೊಬ್ಬಳು ತಂದೆಯಿಂದ ತಪ್ಪಿಸಿಕೊಳ್ಳಲು ಮನೆಯ ಟೆರೆಸ್ ನಿಂದ ಜಿಗಿದಿದ್ದಾಳೆ. ಆಕೆಯ ಕಾಲುಗಳು ಫ್ರಾಕ್ಚರ್ ಆಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾಳೆ. ತಂದೆ ಹಾಡಹಗಲೇ ಕಂಠಪೂರ್ತಿ ಕುಡಿದು ಬಂದಿದ್ದ.
ಮಗಳಿಗೆ ಮನಬಂದಂತೆ ಹೊಡೆಯಲಾರಂಭಿಸಿದ್ದಾನೆ. ತಂದೆಯಿಂದ ತಪ್ಪಿಸಿಕೊಳ್ಳಲು ಬೇರೆ ದಾರಿ ಕಾಣದೇ ಬಾಲಕಿ, ಮನೆಯ ಟೆರೆಸ್ ನಿಂದ ಕೆಳಕ್ಕೆ ಜಿಗಿದ್ಲು. ಸದ್ಯ ಅವಳನ್ನು ಐಸಿಯುಗೆ ದಾಖಲಿಸಿದ್ದು, ಚಿಕಿತ್ಸೆ ಕೊಡಿಸಲಾಗ್ತಿದೆ.
ಪಕ್ಕದ ಮನೆಯಾತ ಈ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾನೆ. ನೆರೆಹೊರೆಯವರು ಬಾಲಕಿಗೆ ಸಹಾಯ ಮಾಡುವ ಬದಲು ಸುಮ್ಮನೇ ಇದನ್ನು ನೋಡುತ್ತ ನಿಂತಿದ್ರು. ದಾರಿಹೋಕರ್ಯಾರೋ ಬಾಲಕಿಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ, ಘಟನೆ ನಡೆದು 3 ಗಂಟೆ ಬಳಿಕ ಬಂದ ಪೊಲೀಸರು ತಂದೆಯನ್ನು ಬಂಧಿಸಿದ್ದಾರೆ.
#Rajsthan अलवर जिले के नीमराना कस्बे के विजय बाग इलाके से सोमवार सुबह एक हैरान करने वाला वीडियो सामने आया. वीडियो में एक पिता छत पर अपनी बेटी की पिटाई करता हुआ नजर आता है. लेकिन जैसे ही वह कुछ सेकंड बाद पीछे हटता है लड़की अचानक से उठती है और छत से कूदने के लिए दौड़ लगा देती है. pic.twitter.com/AIkaCUNhc8
— Zee Bihar Jharkhand (@ZeeBiharNews) April 16, 2018