alex Certify
ಕನ್ನಡ ದುನಿಯಾ       Mobile App
       

Kannada Duniya

ಐವಿಎಫ್ ಸೆಂಟರ್ ನಲ್ಲಿ ನಡೆಯುತ್ತಿದೆ ಇಂಥ ಕೃತ್ಯ

ರಾಜಸ್ತಾನ ಉದಯ್ಪುರದ ಐವಿಎಫ್ ಸೆಂಟರ್ ವಿರುದ್ಧ ಮಹಿಳೆಯೊಬ್ಬಳು ಗಂಭೀರ ಆರೋಪ ಮಾಡಿದ್ದಾಳೆ. ಐವಿಎಫ್ ಸೆಂಟರ್ ನಲ್ಲಿ ಮಹಿಳೆಯರ ಗರ್ಭದಿಂದ ಅಂಡಾಣುಗಳನ್ನು ಹೊರ ತೆಗೆಯಲಾಗುತ್ತಿದೆ ಎಂದು ಮಹಿಳೆ ದೂರಿದ್ದಾಳೆ. ಈ ಸಂಬಂಧ ಪೊಲೀಸರಿಗೆ ದಾಖಲೆಗಳನ್ನು ನೀಡಿದ್ದಾಳೆ.

ಗುಜರಾತಿನ ಸೂರತ್ ನಿವಾಸಿ ಮಹಿಳೆಗೆ, ದಲ್ಲಾಳಿಯೊಬ್ಬ ಹಣದ ಆಸೆ ತೋರಿಸಿ ಉದಯ್ಪುರಕ್ಕೆ ಕರೆದೊಯ್ದಿದ್ದಾನಂತೆ. ಅಲ್ಲಿ ಐವಿಎಫ್ ಸೆಂಟರ್ ವೈದ್ಯೆಯನ್ನು ಪರಿಚಯಿಸಿದ್ದಾನಂತೆ. ಮಹಿಳೆಗೆ ವೈದ್ಯೆ ಮೇ10 ರಂದು ಇಂಜೆಕ್ಷನ್ ನೀಡಿದ್ದಾಳಂತೆ. ಇಂಜೆಕ್ಷನ್ ಪಡೆದ ಮಹಿಳೆಗೆ ಅಲರ್ಜಿಯಾಗಿದ್ದು, ಹೊಟ್ಟೆ ನೋವು ಕಾಣಿಸಿಕೊಂಡಿದೆ.

ಇದ್ರ ನಂತ್ರ ಮಹಿಳೆ ಅಂಡಾಣು ದಾನ ಮಾಡಲು ಹಿಂದೇಟು ಹಾಕಿದ್ದಾಳೆ. ಆದ್ರೆ ಬಲವಂತ ಮಾಡಿದ ವೈದ್ಯೆ ಅಂಡಾಣು ತೆಗೆದಿದ್ದಾಳಂತೆ. ಕೆಲಸ ಮುಗಿದ ಮೇಲೆ 25 ಸಾವಿರ ಕೈಗಿಟ್ಟು ಬೆದರಿಸಿ ಮಹಿಳೆಯನ್ನು ಆಸ್ಪತ್ರೆ ಸಿಬ್ಬಂದಿ ಮನೆಗೆ ಕಳುಹಿಸಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು. ನನಗೆ ಮೋಸ ಮಾಡಿ ಅಂಡಾಣು ತೆಗೆಯಲಾಗಿದೆ ಎಂದು ಮಹಿಳೆ ದೂರಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...