alex Certify
ಕನ್ನಡ ದುನಿಯಾ       Mobile App
       

Kannada Duniya

ಜೈಲಿನಲ್ಲಿ ಕಾಲ ಕಳೆಯುವಂತಾಗಿದೆ ನಿರಪರಾಧಿ

30 ವರ್ಷದ ರಿಯಾಸತ್ ಅಲಿ ಅನ್ಸಾರಿ ರಾಜಸ್ತಾನದ ಬುಂದಿ ಜಿಲ್ಲೆಯಲ್ಲಿ ಕೃಷಿ ಸಾಮಗ್ರಿಗಳ ಮಳಿಗೆ ಇಟ್ಕೊಂಡಿದ್ದಾನೆ. ಆತನ ತಂದೆ 80 ವರ್ಷದ ಅಬ್ದುಲ್ ವಹೀದ್ ಅನ್ಸಾರಿ 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಅನ್ನೋ ಆರೋಪದ ಮೇಲೆ ಪೊಲೀಸರು ಬಂಧಿಸಿದ್ರು.

ಅಬ್ದುಲ್ ವಹೀದ್ ಬಂಧನಕ್ಕೆ ಕಾರಣವಾಗಿದ್ದು ವೈರಲ್ ಆಗಿದ್ದ ಒಂದು ವಿಡಿಯೋ. ಬಿಳಿ ಜುಬ್ಬಾ ಪೈಜಾಮಾ, ತಲೆಗೆ ಟೋಪಿ ಧರಿಸಿದ್ದ ವೃದ್ಧನೊಬ್ಬ ಬಾಲಕಿಗೆ ಕಿರುಕುಳ ಕೊಡ್ತಾ ಇರೋ ದೃಶ್ಯ ಆ ವಿಡಿಯೋದಲ್ಲಿತ್ತು. ಆರೋಪಿಯ ಮುಖ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ.

ಆದ್ರೆ ಆ ವ್ಯಕ್ತಿ ಅಬ್ದುಲ್ ನನ್ನು ಹೋಲುತ್ತಿದ್ದ. ಇದೇ ಕಾರಣಕ್ಕೆ ಜನರು ಅಬ್ದುಲ್ ಬಂಧನಕ್ಕೆ ಆಗ್ರಹಿಸಿದ್ರು. ಬಿಜೆಪಿ, ವಿಎಚ್ ಪಿ ಕಾರ್ಯಕರ್ತರು ಕೂಡ ಪ್ರತಿಭಟನೆ ನಡೆಸಿದ್ರು. ಆತನ ಮನೆ ಮೇಲೆ ಕಲ್ಲು ತೂರಿದ್ರು, ಕಾರಿಗೂ ಹಾನಿ ಮಾಡಿದ್ರು. ಜುಲೈ 31ರಂದು ಬಾಲಕಿ ತಂದೆ ಅಬ್ದುಲ್ ವಿರುದ್ಧ ಕೇಸ್ ಕೂಡ ದಾಖಲಿಸಿದ್ರು.

ನಂತರ ಪೊಲೀಸರು ಅಬ್ದುಲ್ ನನ್ನು ಬಂಧಿಸಿ ಜೈಲಿಗಟ್ಟಿದ್ರು. ಸಾಕ್ಷ್ಯ ನುಡಿದ ಬಾಲಕಿ ಆ ವಿಡಿಯೋದಲ್ಲಿರುವುದು ತಾನೇ ಅಂತಾನೂ ಹೇಳಿದ್ಲು. ಅಬ್ದುಲ್ ತನ್ನ ತಂದೆಯ ಬೀಡಾ ಅಂಗಡಿಗೆ ಬರುತ್ತಿದ್ದ. ಚಾಕಲೇಟ್ ಕೊಡಿಸೋದಾಗಿ ಕರೆದೊಯ್ದು ಮೂರು ಬಾರಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಅಂತಾ ಹೇಳಿಕೆ ನೀಡಿದ್ಲು.

ಆದ್ರೆ ಆಗಸ್ಟ್ ಮೊದಲ ವಾರದಲ್ಲಿ ಪತ್ರಕರ್ತನೊಬ್ಬ ವಿಡಿಯೋದ ಅಸಲಿಯತ್ತನ್ನು ಬಯಲು ಮಾಡಿದ್ದಾನೆ. ಅದು ಉತ್ತರಪ್ರದೇಶದ ಖುರ್ಜಾ ಎಂಬಲ್ಲಿ ಮಾರ್ಚ್ ನಲ್ಲಿ ನಡೆದಿದ್ದ ಘಟನೆಯಾಗಿತ್ತು. ಆ ವಿಡಿಯೋದಲ್ಲಿರೋ ಆರೋಪಿಯನ್ನು ಬಂಧಿಸಿ ಜೈಲಿನಲ್ಲೂ ಇಡಲಾಗಿದೆ.

ಕಳೆದ ಒಂದು ತಿಂಗಳಿನಿಂದ ಜೈಲಿನಲ್ಲಿರೋ ಅಬ್ದುಲ್ ನಿರಪರಾಧಿ ಅನ್ನೋದು ಪೊಲೀಸರಿಗೆ ಖಚಿತವಾಗಿದೆ, ಬಾಲಕಿ ಕೂಡ ತನ್ನ ಮೇಲೆ ದೌರ್ಜನ್ಯ ನಡೆದಿಲ್ಲ, ಹೆತ್ತವರ ಒತ್ತಡಕ್ಕೆ ಮಣಿದು ಸುಳ್ಳು ಹೇಳಿದೆ ಎನ್ನುತ್ತಿದ್ದಾಳೆ, ಆದ್ರೆ ಆಕೆಯ ಪೋಷಕರು ಮಾತ್ರ ಕೇಸ್ ವಾಪಸ್ ಪಡೆಯುತ್ತಿಲ್ಲ. ತಾನು ಮಾಡದ ತಪ್ಪಿಗೆ ಬಡಪಾಯಿ ಅಬ್ದುಲ್ ಜೈಲಿನಲ್ಲಿ ಕಾಲ ಕಳೆಯುವಂತಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...