alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಂಕಿ ಅನಾಹುತದಲ್ಲೂ ಶಾಸಕರನ್ನು ಬಿಡಲಿಲ್ಲ ಸೆಲ್ಫಿ ಕ್ರೇಜ್!

ffire

ಬೆಕ್ಕಿಗೆ ಆಟ, ಇಲಿಗೆ ಪ್ರಾಣ ಸಂಕಟ ಅನ್ನೋ ಮಾತಿದೆ. ರಾಜಸ್ತಾನದಲ್ಲೂ ಇಂಥದ್ದೇ ಘಟನೆಯೊಂದು ನಡೆದಿದೆ. ಗುಡಿಸಲುಗಳಿಗೆ ಬೆಂಕಿ ಬಿದ್ದು ಜನರು ಕಂಗಾಲಾಗಿದ್ರೆ, ಶಾಸಕರು ಮಾತ್ರ  ಸೆಲ್ಫಿ ತೆಗೆದುಕೊಂಡಿದ್ದಾರೆ. ರಾಜಸ್ತಾನದ ನಾಗ್ಲಾ ಮೊರೊಲಿ ದಾಂಗ್ ಎಂಬ ಗ್ರಾಮವೊಂದರಲ್ಲಿ ಗುಡಿಸಲುಗಳಿಗೆ ಬೆಂಕಿ ಬಿದ್ದಿತ್ತು. ಅದೇ ಮಾರ್ಗವಾಗಿ ತೆರಳುತ್ತಿದ್ದ ಬಯನಾ ಕ್ಷೇತ್ರದ ಬಿಜೆಪಿ ಶಾಸಕ ಬಚ್ಚು ಸಿಂಗ್ ಬಂಶಿವಾಲ್ ಬೆಂಕಿ ಅವಘಡ ಗಮನಿಸಿ ಸ್ಥಳಕ್ಕೆ ಬಂದ್ರು.

ಅಗ್ನಿ ಅನಾಹುತ ಸಂಭವಿಸಿದ್ರೂ ಸ್ಥಳಕ್ಕೆ ಯಾವೊಬ್ಬ ಅಧಿಕಾರಿಯೂ ಬಂದಿರಲಿಲ್ಲ. ಶಾಸಕರೇ ಅವರಿಗೆ ಫೋನ್ ಮಾಡಿ ಕೂಡಲೇ ಬರುವಂತೆ ಸೂಚನೆ ನೀಡಿದ್ರು. ಅಷ್ಟಕ್ಕೆ ಶಾಸಕರು ಸುಮ್ಮನಾಗಿದ್ರೆ ಗ್ರಾಮಸ್ಥರ ಕೋಪ ಕೆರಳುತ್ತಿರಲಿಲ್ಲ. ಗುಡಿಸಲುಗಳು ಸುಟ್ಟು ಕರಕಲಾಗ್ತಾ ಇದ್ರೆ, ಶಾಸಕರು ಅಲ್ಲಿ ನಿಂತು ಸೆಲ್ಫಿ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲ ಅದನ್ನೆಲ್ಲ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಶಾಸಕರ ಈ ವರ್ತನೆ ಫೇಸ್ಬುಕ್ ಬಳಕೆದಾರರ ಕೆಂಗಣ್ಣಿಗೆ ಗುರಿಯಾಗಿದೆ. ಇದ್ದ ಒಂದು ಸೂರನ್ನೂ ಕಳೆದುಕೊಂಡು ಸಂಕಷ್ಟಕ್ಕೀಡಾದ ಜನರಿಗೆ ಸಹಾಯ ಮಾಡೋದು ಬಿಟ್ಟು ಅಲ್ಲೂ ಸೆಲ್ಫಿಯಲ್ಲಿ ಮೈಮರೆತ ಜನಪ್ರತಿನಿಧಿಯನ್ನು ಎಲ್ಲರೂ ತೀವ್ರವಾಗಿ ಟೀಕಿಸಿದ್ದಾರೆ. ಆದ್ರೆ ಶಾಸಕರು ಮಾತ್ರ ಅಧಿಕಾರಿಗಳು ಬೇಗ ಸ್ಥಳಕ್ಕೆ ಬರಲಿ ಅನ್ನೋ ಕಾರಣಕ್ಕೆ ಫೋಟೋ ತೆಗೆದು ಕಳಿಸಿದ್ದೆ ಅಂತಾ ಸಮರ್ಥಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...