alex Certify
ಕನ್ನಡ ದುನಿಯಾ       Mobile App
       

Kannada Duniya

ರಾಹುಲ್ ರನ್ನು ನೇಣಿಗೇರಿಸಿ ಎಂದ ಬಿಜೆಪಿ ಮುಖಂಡ

461606-rahulgandhi07

ರಾಜಕೀಯದಲ್ಲಿ ಕೆಸರೆರಚಾಟ ಹೊಸತೇನಲ್ಲ. ಕೆಲವು ರಾಜಕಾರಣಿಗಳಿಗಂತೂ ವಿವಾದಾತ್ಮಕ ಹೇಳಿಕೆ ನೀಡುವುದೇ ಒಂದು ಹವ್ಯಾಸವಾಗಿದೆ. ಇದಕ್ಕೆ ಇಂಬು ನೀಡುವಂತೆ ಬಿಜೆಪಿ ಮುಖಂಡನೊಬ್ಬ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ನೇಣಿಗೇರಿಸಿ ಇಲ್ಲವೇ ಶೂಟ್ ಮಾಡಿ ಹತ್ಯೆ ಮಾಡಿ ಎನ್ನುವ ಮೂಲಕ ವಿವಾದಕ್ಕೆ ಕಾರಣರಾಗಿದ್ದಾರೆ.

ಹೌದು. ಅಫ್ಜಲ್ ಗುರುವನ್ನು ಹುತಾತ್ಮ ಎಂದೂ, ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗುವ ವಿದ್ಯಾರ್ಥಿಗಳಿಗೆ ಬೆಂಬಲ ನೀಡುತ್ತಿರುವ ರಾಹುಲ್ ಗಾಂಧಿಯನ್ನು ‘ದೇಶದ್ರೋಹಿ’ ಎಂದು ಕಿಡಿ ಕಾರಿರುವ ರಾಜಸ್ತಾನದ ಬಿಜೆಪಿ ಶಾಸಕ ಕೈಲಾಶ್ ಚೌಧರಿ, ರಾಹುಲ್‌ ಅವರನ್ನು ನೇಣಿಗೇರಿಸಿ ಇಲ್ಲವೇ ಶೂಟ್ ಮಾಡಿ ಎನ್ನುವ ಮೂಲಕ ಸಾರ್ವಜನಿಕರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.

ಅಲ್ಲದೇ ರಾಹುಲ್‌ ಅವರನ್ನು ಕಾಂಗ್ರೆಸ್ಸಿಗರು ರಾಜಕುಮಾರ ಅಂತಾರೆ. ಅಂಥಾ ವ್ಯಕ್ತಿ ಅಫ್ಜಲ್ ಗುರುವನ್ನು ಹುತಾತ್ಮ ಎಂದೂ, ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗುವ ವಿದ್ಯಾರ್ಥಿಗಳಿಗೆ ಬೆಂಬಲ ನೀಡುತ್ತಿದ್ದು ಇಂತಹ ದೇಶದ್ರೋಹಿಗಳಿಗೆ ಬೆಂಬಲ ನೀಡುವ ರಾಹುಲ್‌ ಗೆ ಭಾರತದಲ್ಲಿರಲು ಯಾವುದೇ ಅರ್ಹತೆ ಇಲ್ಲ ಎಂದು ಕಿಡಿ ಕಾರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...