alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಸ್ತಾನ ಅಸೆಂಬ್ಲಿಯಲ್ಲಿದೆಯಂತೆ ಪ್ರೇತಾತ್ಮಗಳ ಕಾಟ

ಗುರುವಾರದಂದು ರಾಜಸ್ತಾನದ ವಿಧಾನಸಭೆಯಲ್ಲಿ ರೈತರ ಸಮಸ್ಯೆ, ಮೈನಿಂಗ್ ಹಾಗೂ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಗಂಭೀರ ಚರ್ಚೆ ನಡೆಯುತ್ತಿದ್ದ ವೇಳೆ ಶಾಸಕರೊಬ್ಬರು ಪ್ರಸ್ತಾಪಿಸಿದ ಮತ್ತೊಂದು ವಿಚಾರ ಚರ್ಚೆ ತಿರುವು ಪಡೆಯಲು ಕಾರಣವಾಗಿದೆ.

ರಾಜಸ್ತಾನ ವಿಧಾನಸಭೆ ಸ್ಮಶಾನಕ್ಕೆ ಮೀಸಲಿಟ್ಟ ಜಾಗದಲ್ಲಿ ನಿರ್ಮಾಣವಾಗಿದ್ದು, ಇಲ್ಲಿ ಪ್ರೇತಾತ್ಮಗಳು ವಾಸವಾಗಿವೆ. ಇದರಿಂದ ಶಾಸಕಿ ಕೃತಿಕುಮಾರಿ ಹಾಗೂ ಕಲ್ಯಾಣ್ ಸಿಂಗ್ ಅಕಾಲಿಕವಾಗಿ ಸಾವನ್ನಪ್ಪಿದ್ದಾರೆ. ಹೀಗಾಗಿ ಪೂಜೆ ನೆರವೇರಿಸಬೇಕು ಎಂದು ಬಿಜೆಪಿ ಶಾಸಕ ಅಬಿಬುರ್ ರೆಹಮಾನ್ ಹಾಗೂ ಕಾಳುಲಾಲ್ ಗುರ್ಜರ್, ಮುಖ್ಯಮಂತ್ರಿ ವಸುಂಧರಾ ರಾಜೇ ಅವರಿಗೆ ಮನವಿ ಮಾಡಿದ್ದಾರೆ.

ಈ ಹಿಂದೆಯೂ, ವಿಧಾನಸಭೆ ವಾಸ್ತು ದೋಷದಿಂದ ಕೂಡಿದೆ ಎಂದು ಕೆಲ ಚುನಾಯಿತ ಪ್ರತಿನಿಧಿಗಳು ಹೇಳಿದ್ದರು. ಆದರೆ ಇದೇ ಮೊದಲ ಬಾರಿಗೆ ಶಾಸಕರೊಬ್ಬರು ಪ್ರೇತಾತ್ಮಗಳ ವಾಸದ ವಿಚಾರವನ್ನು ಪ್ರಸ್ತಾಪಿಸಿದ್ದು, ಆದರೆ ಇದನ್ನು ತಳ್ಳಿ ಹಾಕಿರುವ ಹಿರಿಯ ಅಧಿಕಾರಿಯೊಬ್ಬರು ಇಂತಹ ವಿಚಾರಗಳಲ್ಲಿ ಯಾವುದೇ ಹುರುಳಿಲ್ಲವೆಂದಿದ್ದಾರೆ. ಶಾಸಕರು ಪ್ರಸ್ತಾಪಿಸಿದ್ದಂತೆ ದೋಷ ನಿವಾರಣೆಗಾಗಿ ಪೂಜೆ ನಡೆಯಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...