alex Certify
ಕನ್ನಡ ದುನಿಯಾ       Mobile App
       

Kannada Duniya

ಅಪಘಾತದ ನಂತ್ರ ಸೆಲ್ಫಿ ತೆಗೆದ್ರು ಜನ: ಹಾರಿ ಹೋಯ್ತು ಮೂವರ ಪ್ರಾಣ

ಜನರಲ್ಲಿ ಮಾನವೀಯತೆ ಮರೆತು ಹೋಗಿದೆ. ವ್ಯಕ್ತಿಯೊಬ್ಬ ಪ್ರಾಣ ಬಿಡ್ತಿದ್ದರೆ ಜನ ನಿಂತು ನೋಡ್ತಾರೆ. ಶೋಕಿಗೆ ಕೆಲವರು ಸೆಲ್ಫಿ ತೆಗೆಯುತ್ತಾರೆ. ಇಂಥಹದ್ದೇ ಘಟನೆ ರಾಜಸ್ತಾನದಲ್ಲಿ ಬೆಳಕಿಗೆ ಬಂದಿದೆ. ಬಾಡ್ಮೇರಾದಲ್ಲಿ ರಸ್ತೆ ಅಪಘಾತವೊಂದು ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಬದಲು ನೆರೆದಿದ್ದವರು ಸೆಲ್ಫಿ ತೆಗೆಯುತ್ತ ಕಾಲ ಕಳೆದಿದ್ದಾರೆ. ಇದ್ರಿಂದ ಮೂವರ ಪ್ರಾಣ ಪಕ್ಷಿ ಹಾರಿ ಹೋಗಿದೆ.

ಮಂಗಳವಾರ ಘಟನೆ ನಡೆದಿದೆ. ಒಂದೇ ಬೈಕ್ ನಲ್ಲಿ ಮೂವರು ಹೋಗ್ತಿದ್ದರಂತೆ. ಈ ವೇಳೆ ಶಾಲಾ ಬಸ್, ಬೈಕ್ ಗೆ ಡಿಕ್ಕಿ ಹೊಡೆದಿದೆ. ಘಟನೆ ನಡೆಯುತ್ತಿದ್ದಂತೆ ಜನರು ಸೇರಿದ್ದಾರೆ. ಒಬ್ಬರೂ ಮಾನವೀಯತೆ ತೋರಲಿಲ್ಲ. ಕೆಲವರು ವಿಡಿಯೋ ಮಾಡಿದ್ರೆ ಮತ್ತೆ ಕೆಲವರು ಗಾಯಾಳುಗಳ ಜೊತೆ ಸೆಲ್ಫಿ ತೆಗೆಯುತ್ತ ಕಾಲಹರಣ ಮಾಡಿದ್ದಾರೆ.

ಸಹಾಯ ಮಾಡುವಂತೆ ಗಾಯಾಳುಗಳು ವಿಧವಿಧವಾಗಿ ಕೇಳಿಕೊಂಡಿದ್ದಾರೆ. ಆದ್ರೆ ಯಾವುದೇ ಪ್ರಯೋಜನವಾಗಲಿಲ್ಲ. ಚಿಕಿತ್ಸೆ ತಡವಾದ ಕಾರಣ ಮೂವರೂ ಸಾವನ್ನಪ್ಪಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...