alex Certify
ಕನ್ನಡ ದುನಿಯಾ       Mobile App
       

Kannada Duniya

ಅಂತಿಮ ಸಂಸ್ಕಾರಕ್ಕೂ ಅಲ್ಲಿಲ್ಲ ಜಾಗ –ಮನೆಯಾಗಿದೆ ಸ್ಮಶಾನ

20_1442259191

ನಮ್ಮ ದೇಶದಲ್ಲಿ ಟಾಟಾ, ಬಿರ್ಲಾ, ಅಂಬಾನಿಯವರಂತ ಕೋಟ್ಯಾಧಿಪತಿಗಳಿದ್ದಾರೆ. ಹಾಗೆ ಅಂತಿಮ ಸಂಸ್ಕಾರಕ್ಕೂ ಜಾಗ ಇಲ್ಲದಷ್ಟು ಹೀನಾಯ ಸ್ಥಿತಿಯಲ್ಲಿರುವ ಜನರೂ ಬದುಕುತ್ತಿದ್ದಾರೆ. ವರದಿ ಪ್ರಕಾರ ಅಂತಿಮ ಸಂಸ್ಕಾರಕ್ಕೆ ಜಾಗವಿಲ್ಲದೆ ಮನೆಯನ್ನೇ ಸಮಾಧಿ ಮಾಡಿಕೊಂಡಿದ್ದಾರಂತೆ ರಾಜಸ್ಥಾನದ ಜನ.

ನಾವು ಹೇಳ್ತಾ ಇರೋದು ರಾಜಸ್ಥಾನದ ಕಾಲ್ ಬೇಲಿಯಾ ಸಮುದಾಯದ ಬಗ್ಗೆ. ನೃತ್ಯದ ಮೂಲಕ ರಾಜ್ಯ, ದೇಶಗಳಲ್ಲಿ ಈ ಸಮುದಾಯ ಹೆಸರು ಮಾಡಿದೆ. ಆದ್ರೆ ಅವರ ಸ್ಥಿತಿ ಮಾತ್ರ ಈವರೆಗೂ ಸುಧಾರಿಸಿಲ್ಲ. ಅಸ್ಪೃಶ್ಯತೆ ಅವರನ್ನು ಕಿತ್ತು ತಿನ್ನುತ್ತಿದೆ. ಯಾರಾದ್ರೂ ಸಾವನ್ನಪ್ಪಿದರೆ ಸಮುದಾಯದವರ ಚಿಂತೆ ಇಮ್ಮಡಿಯಾಗುತ್ತದೆ.21_1442259576

ಹೆಣ ಹೂಳಲು ಜಾಗವಿಲ್ಲದೆ ಪರಿತಪಿಸುತ್ತಾರೆ. ಕೆಲವರು ತಮ್ಮ ಮನೆಯನ್ನೇ ಸಮಾಧಿ ಮಾಡಿಕೊಂಡಿದ್ದಾರೆ. ಮನೆಗೆ ಹೋದ್ರೆ ಸಮಾಧಿಗೆ ಹೋದ ಅನುಭವವಾಗುತ್ತದೆ. ಅಸ್ಪೃಶ್ಯತೆ ಹೆಸರಲ್ಲಿ ಯಾವ ಜಾತಿಯ ಜನರೂ ಅಂತಿಮ ಸಂಸ್ಕಾರಕ್ಕೆ ಸ್ಮಶಾನದಲ್ಲಿ ಜಾಗ ನೀಡುತ್ತಿಲ್ಲ. ಬರಡು ಭೂಮಿಯನ್ನೂ ನೀಡುತ್ತಿಲ್ಲ. ಇದರಿಂದಾಗಿ ಸಾಯುವ ಮುನ್ನವೇ ಜನರು ಸ್ಮಶಾನಕ್ಕೆ ವ್ಯವಸ್ಥೆ ಮಾಡಲು ಶುರುಮಾಡುತ್ತಾರೆ.

ಶಾಲೆ, ಕುಡಿಯುವ ನೀರು,ವಿದ್ಯುತ್ ಎಲ್ಲದರಿಂದಲೂ ವಂಚಿತರಾಗಿರುವ ಜನ ಸರ್ಕಾರದ ಯಾವುದೇ ಸವಲತ್ತನ್ನು ಪಡೆಯುತ್ತಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...