alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ


sbbj atmದರೋಡೆ ಮಾಡಲು ದುಷ್ಕರ್ಮಿಗಳು ಸುಲಭ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಇತ್ತೀಚೆಗೆ ಎ.ಟಿ.ಎಂ.ಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದ ಅನೇಕ ಘಟನೆಗಳು ನಡೆದಿವೆ. ಅದರಲ್ಲಿಯೂ ರಾಜಸ್ತಾನದಲ್ಲಿ ನಡೆದಿರುವ ಈ ಘಟನೆ ಬೆಚ್ಚಿ ಬೀಳಿಸುವಂತಿದೆ.

ರಾಜಸ್ತಾನ ಎಸ್.ಬಿ.ಬಿ.ಜೆ. ಬ್ಯಾಂಕ್ ಗೆ ಸೇರಿದ ಎ.ಟಿ.ಎಂ. ಒಂದಕ್ಕೆ ತಡರಾತ್ರಿ ನುಗ್ಗಿದ ದುಷ್ಕರ್ಮಿಗಳು, ಅಲ್ಲೇ ಮಲಗಿದ್ದ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಮಲಗಿದ್ದ ಭದ್ರತಾ ಸಿಬ್ಬಂದಿಯ ತಲೆಗೆ ದೊಣ್ಣೆಯಿಂದ ಬರೋಬ್ಬರಿ 8 ಸಲ ಹೊಡೆದಿದ್ದು, ಮಲಗಿದ್ದ ಸೆಕ್ಯೂರಿಟಿ ಗಾರ್ಡ್ ಅಲ್ಲಾಡದೆ ಮಲಗಿದ್ದಾನೆ. ಆತನ ಕಿವಿಯಿಂದ ರಕ್ತ ಸೋರಿದರೂ, ಕರುಣೆ ತೋರದ ರಾಕ್ಷಸರು, ಹಲ್ಲೆ ಮಾಡಿ, ನಂತರ ಎ.ಟಿ.ಎಂ.ನಲ್ಲಿದ್ದ ಸಿಸಿ ಕ್ಯಾಮೆರಾ ಹಾಳು ಮಾಡಲು ಪ್ರಯತ್ನಿಸಿದ್ದಾರೆ.

ಬಟ್ಟೆಯಿಂದ ಮುಖ ಮುಚ್ಚಿಕೊಂಡು, ಕೈಗೆ ಗ್ಲೌಸ್ ಹಾಕಿಕೊಂಡಿದ್ದ ದುಷ್ಕರ್ಮಿ ಅಮಾನವೀಯವಾಗಿ ಸೆಕ್ಯೂರಿಟಿ ಗಾರ್ಡ್ ತಲೆಗೆ ಹೊಡೆಯುವ ದೃಶ್ಯ ಸಂಪೂರ್ಣವಾಗಿ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜೂನ್ 9 ರಂದು ಈ ಘಟನೆ ನಡೆದಿದ್ದು, 14 ರಂದು ಚಿಕಿತ್ಸೆ ಫಲಕಾರಿಯಾಗದೇ, ಸೆಕ್ಯೂರಿಟಿ ಗಾರ್ಡ್ ಮೃತಪಟ್ಟಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...