alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿ, ಶಾ ಕೈಗೆ ಪೆಟ್ರೋಲ್ ಗನ್ ಕೊಟ್ಟ ರಾಜ್ ಠಾಕ್ರೆ…!

ಮಹಾರಾಷ್ಟ್ರ ನವ ನಿರ್ಮಾಣ ಸೇನೆ (ಎಂಎನ್ಎಸ್)ಯ ನಾಯಕ ರಾಜ್ ಠಾಕ್ರೆ ಅವರು ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಕೈಗೆ ಪೆಟ್ರೋಲ್ ಗನ್ ನೀಡಿದ್ದಾರೆ.

ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ಕಾರ್ಟೂನ್ ಒಂದನ್ನು ರಾಜ್ ಠಾಕ್ರೆ ಬರೆದಿದ್ದು, ಅದರಲ್ಲಿ ಮೋದಿ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ.

ಈ ವ್ಯಂಗ್ಯ ಚಿತ್ರದಲ್ಲಿ ಪ್ರಧಾನಿ ಮೋದಿ ಅವರು ಪೆಟ್ರೋಲ್ ಬಂಕ್ ಒಂದರಲ್ಲಿ ಪೆಟ್ರೋಲ್ ಗನ್ ಅನ್ನು ಕಾರಿನಲ್ಲಿ ಕುಳಿತ ಭಯಭೀತ ಪ್ರಯಾಣಿಕನತ್ತ ಹಿಡಿದಿದ್ದಾರೆ. ಸನಿಹದಲ್ಲೇ ಕಾರಿನ ಮೇಲೆ ಕೈಯಿಟ್ಟು ನಿಂತ ಅಮಿತ್ ಶಾ ವ್ಯಂಗ್ಯದಿಂದ ನೋಡುತ್ತಿದ್ದಾರೆ.

“ತೈಲ ಬೆಲೆ ಏರಿಕೆ ಕೇಂದ್ರ ಸರ್ಕಾರದ ತಪ್ಪು ಲೆಕ್ಕಾಚಾರದ ಫಲವಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಸೆ.10 ರಂದು ಕರೆ ಕೊಡಲಾಗಿರುವ ಭಾರತ್ ಬಂದ್‌ಗೆ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಪೂರ್ಣ ಬೆಂಬಲ ನೀಡಲಿದೆ” ಎಂಎನ್ಎಸ್‌ ಮುಖ್ಯಸ್ಥ ರಾಜ್ ಠಾಕ್ರೆ ಟ್ವೀಟ್ ಮೂಲಕ ಘೋಷಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...