alex Certify
ಕನ್ನಡ ದುನಿಯಾ       Mobile App
       

Kannada Duniya

ಆಸ್ಪತ್ರೆಗೆ ನುಗ್ಗಿದ ನೀರು: ಚಿಂತಾಜನಕವಾಗಿದೆ ರೋಗಿಗಳ ಸ್ಥಿತಿ

ಬಿಹಾರದಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಪಾಟ್ನಾದ ಅನೇಕ ಪ್ರದೇಶಗಳಲ್ಲಿ ನೀರು ತುಂಬಿದೆ. ನಗರದ ರಸ್ತೆಗಳ ಮೇಲೆ ನೀರು ನಿಂತಿದ್ದು, ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಸವಾರರೊಂದೇ ಅಲ್ಲ ಆಸ್ಪತ್ರೆಯಲ್ಲಿರುವ ರೋಗಿಗಳ ಸ್ಥಿತಿ ಚಿಂತಾಜನಕವಾಗಿದೆ.

ಪಾಟ್ನಾದ ಹೆಚ್ಎಂಸಿಹೆಚ್ ಆಸ್ಪತ್ರೆಗೆ ನೀರು ನುಗ್ಗಿದೆ. ಆಸ್ಪತ್ರೆ ವಾರ್ಡ್ ಗಳಲ್ಲಿ ಮಂಡಿಯವರೆಗೆ ಬರುವಷ್ಟು ನೀರು ನಿಂತಿದೆ. ಆಸ್ಪತ್ರೆ ರೂಮುಗಳು ಕೆರೆಯಾಗಿ ಮಾರ್ಪಟ್ಟಿವೆ. ಆಸ್ಪತ್ರೆಯ ಐಸಿಯು ವಾರ್ಡ್ ನಿಂದ ಹಿಡಿದು ವೈದ್ಯರ ಕೋಣೆ ಸೇರಿದಂತೆ ಎಲ್ಲೆಡೆ ನೀರು ನಿಂತಿದೆ.

ಆಸ್ಪತ್ರೆ ಈ ದುಸ್ಥಿತಿಯಲ್ಲಿಯೇ ವೈದ್ಯರು ರೋಗಿಗಳಿಗೆ ಚಿಕಿತ್ಸೆ ಮುಂದುವರೆಸಿದ್ದಾರೆ. ಅನಾರೋಗ್ಯದಿಂದ ಮುಕ್ತಿ ಪಡೆಯಲು ರೋಗಿಗಳು ಆಸ್ಪತ್ರೆಗೆ ಬರ್ತಾರೆ. ಆದ್ರೆ ಆಸ್ಪತ್ರೆಯೇ ರೋಗ ಹರಡುವ ಕೇಂದ್ರವಾಗ್ತಿದೆ. ಹೊಲಸು ನೀರು ಆಸ್ಪತ್ರೆಗೆ ನುಗ್ಗಿರುವುದ್ರಿಂದ ರೋಗಿಗಳ ಆರೋಗ್ಯದಲ್ಲಿ ಮತ್ತಷ್ಟು ಏರುಪೇರಾಗುವ ಸಾಧ್ಯತೆಯಿದೆ. ಸಾಂಕ್ರಾಮಿಕ ರೋಗ ಕಾಡುವ ಸಾಧ್ಯತೆಯಿದೆ. ಆಸ್ಪತ್ರೆ ಸಿಬ್ಬಂದಿ ನೀರು ಹೊರ ಹಾಕುವ ಯತ್ನ ನಡೆಸುತ್ತಲೇ ಇದೆ. ಆದ್ರೆ ಯಾವುದೇ ಪ್ರಯೋಜನವಾಗ್ತಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...