alex Certify
ಕನ್ನಡ ದುನಿಯಾ       Mobile App
       

Kannada Duniya

ಹಬ್ಬಕ್ಕಾಗಿ ವಿಶೇಷ ರೈಲು ಬಿಡಲಿದೆ ಇಲಾಖೆ

ಸೆಪ್ಟೆಂಬರ್ 21ರಿಂದ ದೇಶದೆಲ್ಲೆಡೆ ದಸರಾ ಸಂಭ್ರಮ ಮನೆ ಮಾಡಲಿದೆ. ಮುಂದಿನ ತಿಂಗಳು ದೀಪಾವಳಿ. ಹಬ್ಬದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ವಿಶೇಷ ರೈಲು ಸಂಚಾರಕ್ಕೆ ಮುಂದಾಗಿದೆ. ದೇಶದಾದ್ಯಂತ 4 ಸಾವಿರ ವಿಶೇಷ ರೈಲುಗಳು ಸಂಚರಿಸಲಿವೆ.

ವಿಶೇಷ ರೈಲಿನಲ್ಲಿ ಸುರಕ್ಷತೆ ಹಾಗೂ ಸೌಕರ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗುವುದು.  ಈ ವರ್ಷ ದುರ್ಗಾ ಪೂಜೆ, ದೀಪಾವಳಿ, ಛಠ್ ವೃತ ಹಬ್ಬದ ಹಿನ್ನೆಲೆಯಲ್ಲಿ 4 ಸಾವಿರ ರೈಲುಗಳು ಹೆಚ್ಚುವರಿಯಾಗಿ ಸಂಚರಿಸಲಿವೆ ಎಂದು ರೈಲ್ವೆ ಸಚಿವ ಮನೋಜ್ ಸಿನ್ಹಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

306 ನಿಯಮಿತ ರೈಲಿನ ಬೋಗಿಯಲ್ಲಿ ಹೆಚ್ಚಳ ಮಾಡಲಾಗಿದೆ. 9,500 ಹೆಚ್ಚುವರಿ ಬೋಗಿಗಳನ್ನು ಅಳವಡಿಸಲಾಗಿದೆ. ರೈಲಿನ ಈ ವಿಶೇಷ ವ್ಯವಸ್ಥೆಯ ಲಾಭವನ್ನು ಪ್ರಯಾಣಿಕರು ಅಕ್ಟೋಬರ್ 30ರವರೆಗೆ ಪಡೆಯಬಹುದಾಗಿದೆ. ಸೆಪ್ಟೆಂಬರ್ 22ರಿಂದ ವಿಶೇಷ ರೈಲುಗಳು ಸಂಚಾರ ಶುರುಮಾಡಲಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...