alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಯೋಜನೆಯ ಪುನರ್ ಪರಿಶೀಲನೆಗೆ ಮುಂದಾದ ರೈಲ್ವೆ ಇಲಾಖೆ

ಭಾರತೀಯ ರೈಲ್ವೆ ಇಲಾಖೆ ತನ್ನ ಕೆಲ ತಿಂಗಳ ಹಿಂದಿನಿಂದ ಜಾರಿಗೆ ತಂದಿರುವ ಫ್ಲೆಕ್ಸಿ ಫೇರ್ ಯೋಜನೆಯ ಪುನರ್ ಪರಿಶೀಲನೆಗೆ ಮುಂದಾಗಿದೆ. ಇದರ ಭಾಗವಾಗಿ ಫ್ಲೆಕ್ಸಿ ಫೇರ್ ಯೋಜನೆಯನ್ನ ರೈಲ್ವೆ ಇಲಾಖೆ ರದ್ದುಗೊಳಿಸುವ ಸಾಧ್ಯತೆ ಇದೆ ಅಂತ ಹೇಳಲಾಗ್ತಿದೆ. ಮುಂದಿನ ವಾರದಲ್ಲಿ ರೈಲ್ವೆ ಇಲಾಖೆ ಈ ಬಗ್ಗೆ ಪ್ರಕಟಣೆ ಹೊರಡಿಸುವ ಸಾಧ್ಯತೆ ಇದೆ.

ರೈಲುಗಳಲ್ಲಿ ಕೆಲ ಪ್ರಯಾಣಿಕರಿಗೆ ಶುಲ್ಕ ಪಾವತಿಯಲ್ಲಿ ರಿಯಾಯಿತಿ ನೀಡುವ ಯೋಜನೆ ಇದಾಗಿತ್ತು. ಈ ಯೋಜನೆಯನ್ನ ಪ್ರಾಯೋಗಿಕವಾಗಿ ಜಾರಿಗೆ ತಂದ ನಂತರದಲ್ಲಿ ರೈಲ್ವೆ ಪ್ರಯಾಣದಲ್ಲಿ ಅಂತಾ ಗಮನಾರ್ಹವಾದ ಬದಲಾವಣೆ ಏನೂ ಆಗಿಲ್ಲ. ಶೇಕಡಾ 30 ಕ್ಕಿಂತ ಕಡಿಮೆ ಪ್ರಯಾಣಿಕರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಹಾಗಾಗಿ ಈ ಯೋಜನೆಯನ್ನು ರದ್ದುಪಡಿಸೋಕೆ ರೈಲ್ವೆ ಇಲಾಖೆ ಚಿಂತನೆ ನಡೆಸಿದೆ.

ಕೇಂದ್ರದ ಮಹಾ ಲೆಕ್ಕ ಪರಿಶೋಧಕರು ಕೊಟ್ಟಿರುವ ವರದಿಯ ಪ್ರಕಾರ ಫ್ಲೆಕ್ಸಿ ಫೇರ್ ವ್ಯವಸ್ಥೆ ಜಾರಿಗೆ ಬಂದ ನಂತರದಲ್ಲಿ ಹಮ್ಸಫರ್ ರೈಲಿನಲ್ಲಿ ಶೇಕಡಾ 50 ರಷ್ಟು ಹೆಚ್ಚುವರಿ ಪ್ರಯಾಣಿಕರು ಯೋಜನೆಯ ಲಾಭ ಪಡೆದಿದ್ದರು. ಮೂಲ ದರಕ್ಕಿಂತ ಶೇಕಡಾ 15 ರಷ್ಟು ಪ್ರಯಾಣದ ವೆಚ್ಚ ಪ್ರತಿ ಹಂತದಲ್ಲೂ ಹೆಚ್ಚಾಗಿತ್ತು. ಹಾಗಾಗಿ ರೈಲು ಪ್ರಯಾಣಕ್ಕಿಂತ ವಿಮಾನ ಪ್ರಯಾಣವೇ ಕಡಿಮೆ ಎಂಬಂತಾಗಿಬಿಟ್ಟಿತ್ತು. ಹಾಗಾಗಿ ಯೋಜನೆಯನ್ನ ಮೊಟಕುಗೊಳಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...