alex Certify
ಕನ್ನಡ ದುನಿಯಾ       Mobile App
       

Kannada Duniya

ಶೀಘ್ರದಲ್ಲೇ ಸಂಚರಿಸಲಿವೆ ಗಾಜಿನ ಮೇಲ್ಚಾವಣಿಯುಳ್ಳ ಟ್ರೈನ್

glass-trainಪ್ರವಾಸೋದ್ಯಮವನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರೈಲ್ವೇ, ದೇಶದ ಪ್ರಮುಖ ಸ್ಥಳಗಳಲ್ಲಿ ಗಾಜಿನ ಮೇಲ್ಚಾವಣಿಯುಳ್ಳ ರೈಲುಗಳ ಸಂಚಾರ ಆರಂಭಿಸಲು ಮುಂದಾಗಿದ್ದು, ಈ ವರ್ಷದ ಡಿಸೆಂಬರ್ ನಲ್ಲಿ ಈ ರೈಲುಗಳ ಸಂಚಾರ ಆರಂಭವಾಗಲಿದೆ.

2015 ರಲ್ಲಿ ಈ ಕುರಿತು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಪೆರಂಬೂರಿನ ಕೋಚ್ ಫ್ಯಾಕ್ಟರಿಯಲ್ಲಿ ಕೋಚ್ ಗಳ ನಿರ್ಮಾಣ ಕಾರ್ಯ ಆರಂಭವಾಗಿದೆ. ಆರಂಭಿಕ ಹಂತದಲ್ಲಿ ಕಾಶ್ಮೀರ ಕಣಿವೆ ಹಾಗೂ ವಿಶಾಖಪಟ್ಟಣಂ ನಲ್ಲಿ ಸಂಚರಿಸುವ ರೈಲುಗಳಿಗೆ ಈ ಕೋಚ್ ಗಳನ್ನು ಅಳವಡಿಸಲಾಗುತ್ತದೆ.

ಸ್ವಿಜ್ಜರ್ಲ್ಯಾಂಡ್ ನಲ್ಲಿ ಪಾರದರ್ಶಕ ರೈಲುಗಳು ಸಂಚರಿಸುತ್ತಿದ್ದು, ಇದೇ ರೀತಿ ಭಾರತದಲ್ಲೂ ಇಂತಹ ರೈಲುಗಳ ಸಂಚಾರ ಆರಂಭಿಸುವ ಮೂಲಕ ಪ್ರವಾಸೋದ್ಯಮವನ್ನು ಮತ್ತಷ್ಟು ಆಕರ್ಷಿಣೀಯವಾಗಿಸಲು ರೈಲ್ವೇ ಇಲಾಖೆ ಮುಂದಾಗಿದೆ. ಕೋಚ್ ನಿರ್ಮಾಣಕ್ಕೆ 4 ಕೋಟಿ ರೂ. ವೆಚ್ಚ ತಗುಲುವುದೆಂದು ಹೇಳಲಾಗಿದ್ದು, ಈ ರೈಲುಗಳಲ್ಲಿ ಐಷಾರಾಮಿ ಸೌಲಭ್ಯಗಳೂ ಪ್ರಯಾಣಿಕರಿಗೆ ದೊರೆಯಲಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...