alex Certify
ಕನ್ನಡ ದುನಿಯಾ       Mobile App
       

Kannada Duniya

ಇಲಿ ಕಚ್ಚಿದ ಪ್ರಯಾಣಿಕನಿಗೆ 25 ಸಾವಿರ ರೂ. ಪರಿಹಾರ

ಸೇಲಂ: ರೈಲು ಪ್ರಯಾಣದ ವೇಳೆ ಇಲಿ ಕಚ್ಚಿದ ಪ್ರಯಾಣಿಕನಿಗೆ ರೈಲ್ವೆ ಇಲಾಖೆ 25 ಸಾವಿರ ರೂ. ಪರಿಹಾರ ಹಾಗೂ 2 ಸಾವಿರ ರೂ. ವೈದ್ಯಕೀಯ ನೆರವು ನೀಡಬೇಕಾಗಿದೆ.

ಜಿಲ್ಲಾ ಗ್ರಾಹಕ ವೇದಿಕೆಯಲ್ಲಿ ಪ್ರಯಾಣಿಕ ವೆಂಕಟಾಚಲಂ ಈ ಬಗ್ಗೆ ದೂರು ನೀಡಿದ್ದರು. 2014 ರ ಆ.8 ರಂದು ಅವರು ಚೆನ್ನೈಗೆ ಪ್ರಯಾಣಿಸುವ ವೇಳೆ ಇಲಿ ಕಡಿತದಿಂದ ಗಾಯಗೊಂಡಿದ್ದರು.

3 ತಿಂಗಳೊಳಗಾಗಿ ವೆಂಕಟಾಚಲಂಗೆ ರೈಲ್ವೆ ಇಲಾಖೆ 25 ಸಾವಿರ ರೂ. ಪರಿಹಾರ, 2 ಸಾವಿರ ರೂ. ವೈದ್ಯಕೀಯ ವೆಚ್ಚ ಹಾಗೂ 5 ಸಾವಿರ ರೂ. ನ್ಯಾಯಾಲಯದಲ್ಲಿ ದಾವೆ ಹೂಡಿರುವ ವೆಚ್ಚವನ್ನು ಭರಿಸಬೇಕು. ತಪ್ಪಿದಲ್ಲಿ ಶೇ.9 ರಷ್ಟು ಬಡ್ಡಿ ಹಾಕಲಾಗುತ್ತದೆ ಎಂದು ವೇದಿಕೆ ಅಧ್ಯಕ್ಷ ಆರ್‌.ವಿ. ದೀನ್‌ದಯಾಳನ್‌ ಹಾಗೂ ಸದಸ್ಯೆ ಎಸ್‌. ರಾಜಲಕ್ಷ್ಮೀ ಆದೇಶಿಸಿದ್ದಾರೆ.

ರೈಲ್ವೆ ಟಿಕೆಟ್‌ ಪರಿಶೀಲಕರು(ಟಿಟಿಇ) ಇಲಿ ಕಡಿತದಿಂದ ಉಂಟಾಗಿದ್ದ ಗಾಯಕ್ಕೆ ಪ್ರಥಮ ಚಿಕಿತ್ಸೆ ನೀಡಲೂ ನಿರಾಕರಿಸಿದ್ದರು. ಎಗ್ಮೋರ್ ನಿಲ್ದಾಣದಲ್ಲಷ್ಟೇ ಪ್ರಥಮ ಚಿಕಿತ್ಸೆ ನೀಡಲು ಸಾಧ್ಯ ಎಂದು ಅಸಹಾಯಕತೆ ತೋರಿದ್ದರು. ವೆಂಕಟಾಚಲಂ ಎಗ್ಮೋರ್ ನಿಲ್ದಾಣದಲ್ಲಿ ಇಳಿದು ದೂರು ನೀಡಿ, ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದಿದ್ದಾರೆ. ಬಳಿಕ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...