alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲು ಪ್ರಯಾಣಿಕರಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ…!

ರೈಲ್ವೆ ಟಿಕೆಟ್ ಅನ್ನು IRCTC ಮೂಲಕ ಬುಕ್ಕಿಂಗ್ ಮಾಡಿದ್ರೆ ಇನ್ನಷ್ಟು ಅಗ್ಗವಾಗಲಿದೆ. ಯಾಕಂದ್ರೆ ಸರ್ಕಾರ MDR ಗೊಂದಲವನ್ನು ಬಗೆಹರಿಸಲು ನಿರ್ಧರಿಸಿದೆ. ಎಂಡಿಆರ್ ಅಥವಾ ಮರ್ಚಂಟ್ ಡಿಸ್ಕೌಂಟ್ ರೇಟ್ಸ್ ಅನ್ನು ಗ್ರಾಹಕರ ಡೆಬಿಟ್ ಮತ್ತು ಡೆಬಿಟ್ ಕಾರ್ಡ್ ಬಳಕೆ ಮೇಲೆ ಬ್ಯಾಂಕ್ ವಿಧಿಸುತ್ತದೆ.

ಎಂಡಿಆರ್ ಶುಲ್ಕವಿಲ್ಲದೇ ರೈಲ್ವೆ ಟಿಕೆಟ್ ಬುಕ್ಕಿಂಗ್ ಮಾಡಲು ಸಾಧ್ಯವಾಗುವಂತಹ ಸ್ಮಾರ್ಟ್ ಡೆಬಿಟ್ ಕಾರ್ಡ್ ಗಳನ್ನು ವಿತರಿಸಲಾಗುತ್ತದೆ. ಇದಕ್ಕಾಗಿ ಕೇಂದ್ರ ಸರ್ಕಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಹಕಾರ ಪಡೆಯುತ್ತಿದೆ. ಇದರಿಂದ ರೈಲ್ವೆ ಹಾಗೂ ಎಸ್ ಬಿ ಐ ಎರಡಕ್ಕೂ ಲಾಭವಿದೆ.

ಹೆಚ್ಹೆಚ್ಚು ಪ್ರಯಾಣಿಕರು ಆನ್ ಲೈನ್ ನಲ್ಲೇ ಟಿಕೆಟ್ ಬುಕ್ಕಿಂಗ್ ಮಾಡುವಂತೆ ರೈಲ್ವೆ ಇಲಾಖೆ ಪ್ರೋತ್ಸಾಹಿಸಬಹುದು. ಎಸ್ ಬಿ ಐ ಕೂಡ ತನ್ನ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಅವಕಾಶವಿದೆ. ಕೇವಲ ರೈಲ್ವೆ ಟಿಕೆಟ್ ಮಾತ್ರವಲ್ಲದೆ, ವಿಮಾನ ಮತ್ತು ಬಸ್ ಟಿಕೆಟ್ ಗಳನ್ನು ಕೂಡ ಸ್ಮಾರ್ಟ್ ಡೆಬಿಟ್ ಕಾರ್ಡ್ ಮೂಲಕ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸುವ ಸಾಧ್ಯತೆ ಇದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...