alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಪರ್ಧಿಯ ‘ಲೈಫ್ ಲೈನ್’ ಬಳಕೆ ಕಂಡು ಕಕ್ಕಾಬಿಕ್ಕಿಯಾದ್ರು ಅಮಿತಾಬ್

ಕೆಲವೊಂದು ಪದಗಳ ಸಂಪೂರ್ಣ ವಿವರಣೆ ಎಷ್ಟೋ ಮಂದಿಗೆ ಗೊತ್ತಿರೋದೇ ಇಲ್ಲ. ದಿನನಿತ್ಯದಲ್ಲಿ ಬಳಕೆಯಲ್ಲಿರುವ ಪದಗಳ ಫುಲ್ಫಾರ್ಮ್ ಏನು ಅನ್ನೋದನ್ನ ತಿಳಿದುಕೊಳ್ಳೋದಕ್ಕೂ ಕೆಲವೊಮ್ಮೆ ಹರಸಾಹಸ ಪಡಬೇಕಾಗುತ್ತೆ. ಇಂತದ್ದೊಂದು ವಿದ್ಯಮಾನ ಬಾಲಿವುಡ್ ಬಿಗ್ ಬಿ ಹೋಸ್ಟ್ ಮಾಡುತ್ತಿರುವಂತಾ ಕೌನ್ ಬನೇಗಾ ಕರೋಡ್ಪತಿಯಲ್ಲಿ ನಡೆದಿದೆ.

ಸೋಮೇಶ್ ಚೌಧರಿ ಎಂಬ ರೈಲ್ವೆ ಇಲಾಖೆ ಅಧಿಕಾರಿಯೊಬ್ಬರು ಸೆಪ್ಟೆಂಬರ್ 5 ರಂದು ಕೌನ್ ಬನೇಗಾ ಕರೋಡ್ಪತಿಯ ಹಾಟ್ ಸೀಟ್ ನಲ್ಲಿ ಕೂತಿದ್ದರು. ಅವರಿಗೆ ಅಮಿತಾಬ್ ಬಚ್ಚನ್ ಪಿಎನ್ಆರ್ ಪದದ ವಿಸ್ತೃತ ರೂಪ ಏನು ಅನ್ನೋ ಪ್ರಶ್ನೆಯನ್ನ ಕೇಳಿದ್ದರು. ಈ ಪ್ರಶ್ನೆ ರೈಲ್ವೆ ಇಲಾಖೆಯ ದಿನನಿತ್ಯದ ಕಾರ್ಯ ಚಟುವಟಿಕೆಗೆ ಸಂಬಂಧಿಸಿದ್ದೇ ಅಗಿತ್ತು. ಆದ್ರೆ ರೈಲ್ವೆ ಇಲಾಖೆಯಲ್ಲಿ ಟಿಕೆಟ್ ಪರೀಕ್ಷಕರಾಗಿ ಕೆಲಸ ಮಾಡ್ತಿರೋ ಸೋಮೇಶ್ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳೋಕೆ ಪರದಾಡಬೇಕಾಯ್ತು. ಕೇಳಿದ ಎರಡನೇ ಪ್ರಶ್ನೆಗೆ ಸೋಮೇಶ್ ಉತ್ತರ ಕಂಡುಕೊಳ್ಳೋಕೆ ಲೈಫ್ ಲೈನ್ ಬಳಕೆ ಮಾಡಬೇಕಾಗಿ ಬಂತು.

ಆಡಿಯನ್ಸ್ ಪೋಲ್ ಲೈಫ್ ಲೈನ್ ಬಳಕೆ ಮಾಡಿ ಪಿಎನ್ಆರ್ ಪದಕ್ಕೆ ‘ಪ್ಯಾಸೆಂಜರ್ ನೇಮ್ ರೆಕಾರ್ಡ್’ ಅನ್ನೋ ಅರ್ಥವನ್ನು ತಿಳಿದುಕೊಳ್ಳಬೇಕಾಯ್ತು ಸೋಮೇಶ್. ನೋಡುಗರಿಗೆ ಈ ಘಟನೆ ತುಂಬಾನೇ ಹಾಸ್ಯಾಸ್ಪದ ಅನ್ನಿಸಿದೆ. ಮೂರು ಲೈಫ್ ಲೈನ್ ಗಳನ್ನ ಬಳಕೆ ಮಾಡಿರುವ ಸೋಮೇಶ್ 13 ಪ್ರಶ್ನೆಗಳಿಗೆ ಸರಿ ಉತ್ತರ ನೀಡಿ 25 ಲಕ್ಷ ರೂಪಾಯಿಗಳನ್ನ ಈಗ ಗೆದ್ದಿದ್ದಾರೆ. ಇಂದಿನ ಎಪಿಸೋಡ್ ನಲ್ಲಿ ಅವರ ಆಟ ಮುಂದುವರೆಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...