alex Certify
ಕನ್ನಡ ದುನಿಯಾ       Mobile App
       

Kannada Duniya

ಹೈಟೆಕ್ ಆಗಲಿದೆ ಮೋದಿ ಟೀ ಮಾರಿದ್ದ ರೈಲ್ವೇ ಸ್ಟೇಷನ್

mod-t

ಅಹಮದಾಬಾದ್: ಕಿರಿಯ ವಯಸ್ಸಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಟೀ ಮಾರಾಟ ಮಾಡುತ್ತಿದ್ದ ರೈಲ್ವೇ ಸ್ಟೇಷನ್ ಅಭಿವೃದ್ಧಿಗೆ 8 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ.

ಗುಜರಾತ್ ನ ಮೆಹ್ಸಾನಾ ಜಿಲ್ಲೆ ವಡ್ನಾಗರ್ ನಲ್ಲಿ ಮೋದಿ ಟೀ ಮಾರಾಟ ಮಾಡುತ್ತಿದ್ದರು. ಪ್ರಧಾನಿಯಾಗುವ ಸಂದರ್ಭದಲ್ಲಿ ಮೋದಿ ಇದೇ ವಿಚಾರವನ್ನು ಪ್ರಸ್ತಾಪಿಸಿದ್ದು, ಭಾರೀ ಸುದ್ದಿಯಾಗಿತ್ತು.

ಟೀ ಮಾರಾಟ ಮಾಡುತ್ತಿದ್ದ ಬಾಲಕ ಪ್ರಧಾನಿ ಹುದ್ದೆಗೇರಿದ್ದು, ಇತಿಹಾಸ. ಈಗ ವಡ್ನಾಗರ್ ಸೇರಿದಂತೆ ಈ ಪ್ರದೇಶದ ರೈಲ್ವೇ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲು ರೈಲ್ವೇ ಇಲಾಖೆ ಮುಂದಾಗಿದೆ.

ರೈಲ್ವೇ ಖಾತೆ ರಾಜ್ಯ ಸಚಿವ ಮನೋಜ್ ಸಿನ್ಹಾ ಈ ಕುರಿತು ಮಾಹಿತಿ ನೀಡಿದ್ದು, ವಡ್ನಾಗರ್ ರೈಲ್ವೇ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...