alex Certify
ಕನ್ನಡ ದುನಿಯಾ       Mobile App
       

Kannada Duniya

ಪರಿಶೀಲಿಸುತ್ತಿದ್ದಾಗಲೇ ಕೈ ಕೊಟ್ಟ ಎಸ್ಕಲೇಟರ್

railways-rpf-3457ಮಥುರಾದಲ್ಲಿ ರೈಲ್ವೇ ಅಧಿಕಾರಿಗಳು ಮುಜುಗರದ ಪರಿಸ್ಥಿತಿಯನ್ನನುಭವಿಸಿದ್ದಾರೆ. ಮಥುರಾ ಜಂಕ್ಷನ್ ನಲ್ಲಿ ಕೆಲ ದಿನಗಳ ಹಿಂದಷ್ಟೇ ಉದ್ಘಾಟನೆಗೊಂಡಿದ್ದ ಎಸ್ಕಲೇಟರ್ ಪರಿಶೀಲನೆ ಮಾಡುತ್ತಿದ್ದ ಸಂದರ್ಭದಲ್ಲೇ ತಾಂತ್ರಿಕ ತೊಂದರೆಯಿಂದ ಮಧ್ಯದಲ್ಲೇ ಕೈ ಕೊಟ್ಟಿದೆ.

ಶನಿವಾರದಂದು ಕೇಂದ್ರ ರೈಲ್ವೇ ಬೋರ್ಡ್ ಚೇರ್ಮನ್ ಎ.ಕೆ. ಮಿತ್ತಲ್, ಮಥುರಾ ಜಂಕ್ಷನ್ ಗೆ ಭೇಟಿ ನೀಡಿದ್ದು, ಮೇ 28 ರಂದು ರೈಲ್ವೇ ಇಲಾಖೆಯ ರಾಜ್ಯ ಸಚಿವ ಮನೋಜ್ ಸಿನ್ಹಾ ಉದ್ಘಾಟಿಸಿದ್ದ ಎಸ್ಕಲೇಟರ್ ನಲ್ಲಿ ಹೋಗುತ್ತಿದ್ದ ವೇಳೆ ಅದು ಅರ್ಧಕ್ಕೆ ನಿಂತಿದೆ. ವೃದ್ದರು, ಮಹಿಳೆಯರು, ಮಕ್ಕಳು ಹಾಗೂ ವಿಕಲ ಚೇತನರ ಅನುಕೂಲಕ್ಕೆಂದು ಈ ಎಸ್ಕಲೇಟರ್ ಅಳವಡಿಸಿದ್ದು, ಉದ್ಘಾಟನೆಗೊಂಡ ವಾರದಲ್ಲೇ ಈ ಪರಿಸ್ಥಿತಿ ಎದುರಾಗಿದ್ದರಿಂದ ಸಾರ್ವಜನಿಕರ ಸಮ್ಮುಖದಲ್ಲಿ ಅಧಿಕಾರಿಗಳಿಗೆ ಮುಜುಗರದ ಪರಿಸ್ಥಿತಿ ಎದುರಾಗಿದೆ.

ಬಳಿಕ ಎಸ್ಕಲೇಟರ್ ನ ಮೆಟ್ಟಿಲುಗಳೇರಿ ಹೋದ ಎ.ಕೆ. ಮಿತ್ತಲ್, ನಿಲ್ದಾಣದಲ್ಲಿದ್ದ ಪ್ರಯಾಣಿಕರ ಬಳಿ ತೆರಳಿ ರೈಲ್ವೇ ಇಲಾಖೆಯ ಸಮಸ್ಯೆಗಳನ್ನು ಆಲಿಸಿದ್ದಾರೆ. ಈ ಮಧ್ಯೆ ಆಗ್ರಾ ವಿಭಾಗದ ರೈಲ್ವೇ ಮ್ಯಾನೇಜರ್ ಪ್ರಭಾಶ್ ಕುಮಾರ್, ಎಸ್ಕಲೇಟರ್ ವಿಫಲಗೊಂಡಿದ್ದಕ್ಕೆ ತನಿಖೆ ನಡೆಸಿ ವರದಿ ನೀಡುವಂತೆ ಮಥುರಾ ಜಂಕ್ಷನ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...