alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ಬದಲಾಯ್ತು ರೈಲ್ವೆ ನಿಯಮ

yogi-13_odnnilj

ರೈಲ್ವೆ ಸಚಿವ ಸುರೇಶ್ ಪ್ರಭು ರೈಲ್ವೆ ಇಲಾಖೆಯ ನಾಲ್ಕು ನಿಯಮಗಳಲ್ಲಿ ಬದಲಾಣೆ ತಂದಿದ್ದಾರೆ. ಏಪ್ರಿಲ್ 21ರಿಂದ ಈ ನಿಯಮ ಜಾರಿಗೆ ಬರಲಿದೆ. ಸುರಕ್ಷಿತ ರೈಲ್ವೆ ಪ್ರಯಾಣಕ್ಕಾಗಿ ಪ್ರತಿಯೊಬ್ಬ ಪ್ರಯಾಣಿಕನೂ ಈ ನಿಯಮಗಳ ಬಗ್ಗೆ ತಿಳಿಯುವುದು ಅಗತ್ಯ.

ರೈಲ್ವೆ ಟಿಕೆಟ್ ಬುಕ್ಕಿಂಗ್ ಮಾಡುವ ವೇಳೆ ಇನ್ಮುಂದೆ ಪೌರತ್ವವನ್ನು ನಮೂದಿಸಬೇಕಾಗುತ್ತದೆ.  ಭಾರತೀಯ ಎಂದು ನಮೂದಿಸಬೇಕು. ವಿದೇಶಿ ಪ್ರಯಾಣಿಕರು ಪೌರತ್ವ ಕಾಲಂನಲ್ಲಿ ತಮ್ಮ ಪಾಸ್ ಪೋರ್ಟ್ ನಂಬರ್ ಅಥವಾ ದೇಶದ ಸಂಖ್ಯೆಯನ್ನು ಭರ್ತಿ ಮಾಡಬೇಕಾಗುತ್ತದೆ.  ಭದ್ರತೆ ದೃಷ್ಟಿಯಿಂದ ಈ ನಿಯಮವನ್ನು ಜಾರಿಗೆ ತರಲಾಗಿದೆ.

200 ಕಿಲೋಮೀಟರ್ ಪ್ರಯಾಣ ಮಾಡುವ ಪ್ರಯಾಣಿಕರ ಟಿಕೆಟ್ ಕೇವಲ ಮೂರು ಗಂಟೆಯವರೆಗೆ ಮಾತ್ರ ಮಾನ್ಯವಾಗಲಿದೆ. ಟಿಕೆಟ್ ಪಡೆದು ಮೂರು ಗಂಟೆಯಾದ್ರೂ ಪ್ರಯಾಣಿಕ ಪ್ರಯಾಣ ಶುರುಮಾಡದೇ ಹೋದಲ್ಲಿ ಈ ಟಿಕೆಟನ್ನು ಮಾನ್ಯ ಮಾಡಲಾಗುವುದಿಲ್ಲ.

ಐದು ವರ್ಷ ಮೇಲ್ಪಟ್ಟ ಮಕ್ಕಳಿಗೆ ಫುಲ್ ಟಿಕೆಟ್ ಖರೀದಿ ಮಾಡಬೇಕು. ಆಗ ಮಾತ್ರ ಅವರು ಪೂರ್ತಿ ಸೀಟಿನಲ್ಲಿ ಕುಳಿತು ಪ್ರಯಾಣ ಮಾಡಬಹುದು. ಒಂದು ವೇಳೆ ಟಿಕೆಟ್ ತೆಗೆದುಕೊಳ್ಳದಿದ್ದರೆ ಅಪ್ಪ-ಅಮ್ಮನ ಸೀಟ್ ನಲ್ಲಿಯೇ ಅವರು ಕುಳಿತುಕೊಳ್ಳಬೇಕಾಗುತ್ತದೆ.

ಟಿಕೆಟ್ ಕ್ಯಾನ್ಸಲ್ ಮಾಡಲು ನೀವು 139ಕ್ಕೆ ಕರೆ ಮಾಡಬೇಕು. ಆಗ ನಿಮ್ಮ ಟಿಕೆಟ್ ತಕ್ಷಣ ರದ್ದಾಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...