alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲಿನಲ್ಲಿ ಸಿಗುತ್ತೆ 25 ಬಗೆಯ ಗರಂ ಚಾಯ್

rail tea op

ನವದೆಹಲಿ: ‘ಚಾಯ್ ಗರಂ ಚಾಯ್’ ಇದು ರೈಲ್ವೇ ನಿಲ್ದಾಣದಲ್ಲಿ ಸಾಮಾನ್ಯವಾಗಿ ಕೇಳಿಬರುವ ಧ್ವನಿ. ಇದು ನಿಲ್ದಾಣದ ಮಾತಾಯ್ತು. ರೈಲಿನಲ್ಲಿ ಟೀ ಕುಡಿಯಬೇಕೆನಿಸಿದಾಗ ಕೆಲವೊಮ್ಮೆ ನಿಮಗಿಷ್ಟದ ಟೀ ಸಿಗದಿರಬಹುದು. ಇನ್ನು ಮುಂದೆ ಹಾಗೇನಿಲ್ಲ. ನಿಮಗೆ ಇಷ್ಟವಾದ ಟೀ ರುಚಿಯನ್ನು ನೀವು ಸವಿಯಬಹುದಾಗಿದೆ.

ಹೌದು, ರೈಲಿನಲ್ಲಿ ಇನ್ನುಮುಂದೆ ಬರೋಬ್ಬರಿ 25 ಬಗೆಯ ಟೀ ನಿಮಗೆ ಕುಡಿಯಲು ಸಿಗುತ್ತದೆ. ಶುಂಠಿ ತುಳಸಿ ಟೀ, ಜೇನು ಶುಂಠಿ ನಿಂಬೆ ಟೀ, ಆಮ್ ಪಾಪಡ್ ಟೀ, ಹರಿ ಮಿರ್ಚ್ ಟೀ, ಕುಲ್ಚಾಡ್ ಟೀ ಸೇರಿದಂತೆ ವಿವಿಧ ಬಗೆಯ ಟೀಗಳು ಕೂಡ ನಿಮಗೆ ಸಿಗಲಿವೆ. ಮತ್ತೊಂದು ವಿಷಯವೆಂದರೆ ನಿಮಗೆ ಯಾವ ರೀತಿಯ ಟೀ ಬೇಕೆಂಬುದನ್ನು ನೀವು ಮೊಬೈಲ್ ಆಪ್ ಮೂಲಕವೂ ತಿಳಿಸಬಹುದಾಗಿದೆ. ಭಾರತೀಯ ರೈಲ್ವೇಯ ಕೆಟರಿಂಗ್ ವಿಭಾಗದಿಂದ ಇದಕ್ಕಾಗಿ ಪ್ರತ್ಯೇಕ ಆಪ್ ಸಿದ್ಧಪಡಿಸಲಾಗಿದೆ ಎಂದು ಹೇಳಲಾಗಿದೆ.

ವಿಭಾಗದ ಅಧ್ಯಕ್ಷ ಅರುಣ್ ಕುಮಾರ್ ಮನೋಚಾ ಈ ಕುರಿತು ಮಾಹಿತಿ ನೀಡಿದ್ದು, ಕೆಫೆ ಸಮೂಹದ ಚಾಯೋಸ್ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರಯಾಣಿಕರು ಬಯಸುವ ಟೀ ಪೂರೈಕೆ ಮಾಡಲಾಗುವುದು. ಅಲ್ಲದೇ, 300 ರೂ.ಗೂ ಹೆಚ್ಚು ಆರ್ಡರ್ ಮೇಲೆ ಶೇ.10 ರಷ್ಟು ಹಣ ವಾಪಸ್ ಕೊಡಲಾಗುವುದು ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...