alex Certify
ಕನ್ನಡ ದುನಿಯಾ       Mobile App
       

Kannada Duniya

ಸಾವಿರ ರೈಲುಗಳಲ್ಲಿ ಕೇಳಲಿದೆ ಎಫ್ ಎಂ ಗಾನ

indian_railways_reuters_02

ನವದೆಹಲಿ: ಇನ್ನು ರೈಲಿನಲ್ಲಿ ಸಂಚರಿಸಲು ಬೋರ್ ಎನ್ನುವ ಹಾಗಿಲ್ಲ. ಏಕೆಂದರೆ ದೇಶದ ಒಂದು ಸಾವಿರ ರೈಲುಗಳಲ್ಲಿ ಎಫ್ ಎಂ ಸೇವೆ ಒದಗಿಸಲು ರೈಲ್ವೆ ಇಲಾಖೆ ಮುಂದಾಗಿದೆ.

ರೈಲು ಸಂಚಾರದ ಸಮಯದಲ್ಲಿ ಪ್ರಯಾಣಿಕರಿಗೆ ಮನರಂಜನೆ ಮತ್ತು ಮಾಹಿತಿ ಎರಡನ್ನೂ ಒದಗಿಸಲು ರೈಲ್ವೆ ಇಲಾಖೆ ಚಿಂತನೆ ನಡೆಸಿದೆ. ಈ ಕುರಿತಾಗಿ ಸಧ್ಯದಲ್ಲೇ ‘ರೈಲ್ ರೇಡಿಯೋ ಸರ್ವೀಸ್’ ಯೋಜನೆ ಬರಲಿದೆ. ಈ ಬಗ್ಗೆ ಎಲ್ಲ ರೈಲ್ವೆ ಮಂಡಳಿಯಲ್ಲಿ ಸ್ಟುಡಿಯೋ ಸ್ಥಾಪನೆಯಾಗಲಿದ್ದು, ಎಲ್ಲ ಕಚೇರಿಗಳಿಂದ ಸೇವೆಯ ಕಾರ್ಯಾಚರಣೆ ನಡೆಯಲಿದೆ.
 ಈ ರೇಡಿಯೋ ಸರ್ವೀಸ್ ಮನರಂಜನೆ ಜೊತೆಗೆ ತುರ್ತು ಪರಿಸ್ಥಿತಿ ಮತ್ತು ಪ್ರಕೃತಿ ವಿಕೋಪಗಳ ವಿವರವನ್ನೂ ನೀಡುತ್ತದೆ. ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಕಳೆದ ಬಜೆಟ್ ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದರು. ಈಗ ಅದು ಕಾರ್ಯರೂಪಕ್ಕೆ ಬರಲಿದೆ. ಮೇಲ್, ಎಕ್ಸ್ ಪ್ರೆಸ್, ಪ್ರೀಮಿಯಮ್ ಸೇವೆಗಳಿರುವ 1 ಸಾವಿರ ರೈಲಿನಲ್ಲಿ ಎಫ್ ಎಂ ರೇಡಿಯೋ ಸೇವೆ ಲಭ್ಯವಾಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...