alex Certify
ಕನ್ನಡ ದುನಿಯಾ       Mobile App
       

Kannada Duniya

ಕೈ ಕಾರ್ಯಕರ್ತರನ್ನು ಸೆಳೆಯುತ್ತಿದೆ ‘ರಾಹುಲ್ ಮಿಲ್ಕ್’, ‘ರಾಹುಲ್ ಹರ್ಬಲ್ ಚಹಾ’

2014ರ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಪ್ರಚಾರಕ್ಕಾಗಿ ‘ಚಾಯ್ ಪೆ ಚರ್ಚಾ’ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈಗ ಗೋರಖ್ಪುರದ ಕಾಂಗ್ರೆಸ್ ಮುಖಂಡನೊಬ್ಬ ರಾಹುಲ್ ಗಾಂಧಿ ಮಿಲ್ಕ್ ಹಾಗೂ ರಾಹುಲ್ ಗಾಂಧಿ ಹರ್ಬಲ್ ಚಹಾವನ್ನು ಪ್ರಚಾರದ ಅಸ್ತ್ರವನ್ನಾಗಿ ಬಳಸಿಕೊಂಡಿದ್ದಾನೆ.

ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಅನ್ವರ್ ಹುಸೇನ್ ಎಲ್ಲರಿಗೂ ಹಾಲು ಮತ್ತು ಚಹಾ ವಿತರಣೆ ಮಾಡಿದ್ರು. ರಾಹುಲ್ ಗಾಂಧಿ ಅವರನ್ನು ಒಂದು ಬ್ರಾಂಡ್ ಆಗಿ ಬೆಳೆಸುವ ಅವಶ್ಯಕತೆ ಇದೆ ಅಂತಾ ಅನ್ವರ್ ಹುಸೇನ್ ಹೇಳಿದ್ದಾರೆ.

2005ರಲ್ಲಿ ಅನ್ವರ್ ಹುಸೇನ್ ಕಾಂಗ್ರೆಸ್ ಸೇರಿದ್ದಾರೆ. ರಾಹುಲ್ ಬ್ರಾಂಡ್ ಕ್ರಿಯೇಟ್ ಮಾಡುವ ಮೂಲಕ ಪಕ್ಷಕ್ಕೆ ಇನ್ನಷ್ಟು ಯುವಜನತೆಯನ್ನು ಸೆಳೆಯುವುದು ಇವರ ಪ್ಲಾನ್. 2015ರಲ್ಲಿ ಅನ್ವರ್ ರಾಹುಲ್ ಗಾಂಧಿಯವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡುವಂತೆ ರಕ್ತದಲ್ಲಿ ಪತ್ರ ಕೂಡ ಬರೆದಿದ್ದರು.

ಉತ್ತರ ಪ್ರದೇಶ ಚುನಾವಣೆ ಸಂದರ್ಭದಲ್ಲಿ ಅಖಿಲೇಶ್ ಯಾದವ್ ಹಾಗೂ ರಾಹುಲ್ ಗಾಂಧಿ ಅವರನ್ನು ಕರಣ್ ಅರ್ಜುನ್ ಕಿ ಜೋಡಿ ಅಂತಾ ಕರೆದಿದ್ದರು. ಮತದಾರರಿಗೆ ರಾಹುಲ್ ರೋಸ್ ಕೂಡ ವಿತರಿಸಿ ಸುದ್ದಿಮಾಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...