alex Certify
ಕನ್ನಡ ದುನಿಯಾ       Mobile App
       

Kannada Duniya

ರಾಹುಲ್ ಮುಂದೆ ಮೋದಿ ಪರ ಜಯಘೋಷ

ನೋಟು ನಿಷೇಧಕ್ಕೆ ಒಂದು ವರ್ಷವಾದ ಹಿನ್ನೆಲೆಯಲ್ಲಿ ವ್ಯಾಪಾರಿಗಳ ಸ್ಥಿತಿ ಅರಿಯಲು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದು ಗುಜರಾತ್ ಪ್ರವಾಸ ಕೈಗೊಂಡಿದ್ದಾರೆ. ಸೂರತ್ ನಲ್ಲಿ ವ್ಯಾಪಾರಿಗಳನ್ನು ಭೇಟಿ ಮಾಡಿದ ರಾಹುಲ್ ಗಾಂಧಿ ನೋಟು ನಿಷೇಧ ಹಾಗೂ ಜಿ ಎಸ್ ಟಿ ಬಗ್ಗೆ ವ್ಯಾಪಾರಿಗಳ ಅಭಿಪ್ರಾಯ ಸಂಗ್ರಹಿಸಿದ್ರು.

ಜವಳಿ ಮಾರುಕಟ್ಟೆಗೆ ಹೋಗ್ತಿದ್ದಂತೆ ರಾಹುಲ್ ಮುಜುಗರ ಎದುರಿಸಬೇಕಾಯ್ತು. ರಾಹುಲ್ ಮುಂದೆ ಮೋದಿ ಪರ ಘೋಷಣೆ ಕೇಳಿ ಬಂತು. ಇದು ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ಗಲಾಟೆಗೆ ಕಾರಣವಾಯ್ತು.

ವಜ್ರ ವ್ಯಾಪಾರಿಗಳ ಕೇಂದ್ರಕ್ಕೆ ತೆರಳಿದ ರಾಹುಲ್ ವಜ್ರ ವ್ಯಾಪಾರಿಗಳ ಸಮಸ್ಯೆ ಆಲಿಸಿದ್ರು. ಈ ವೇಳೆ ವ್ಯಾಪಾರಿಗಳು ರಾಹುಲ್ ಗೆ ವಜ್ರ ಕತ್ತರಿಸುವ ತಂತ್ರವನ್ನು ಕಲಿಸಿಕೊಟ್ರು. ನೋಟು ನಿಷೇಧದ ನಂತ್ರ ವಜ್ರ ವ್ಯಾಪಾರಿಗಳು ಸಾಕಷ್ಟು ಸಮಸ್ಯೆ ಎದುರಿಸಿದ್ದಾರೆಂದು ರಾಹುಲ್ ಗಾಂಧಿ ಇದೇ ವೇಳೆ ಹೇಳಿದ್ರು.

ವಿವಿಧ ಉತ್ಪಾದನಾ ಘಟಕಗಳಿಗೆ ಭೇಟಿ ನೀಡಿದ ರಾಹುಲ್, ಅವ್ರ ಸಮಸ್ಯೆ ಆಲಿಸಿದ್ರು. ಜವಳಿ, ಕಸೂತಿ, ಬಣ್ಣ ಹೀಗೆ ಬೇರೆ ಬೇರೆ ಉತ್ಪಾದನಾ ಘಟಕಗಳಿಗೆ ರಾಹುಲ್ ಭೇಟಿ ನೀಡಿದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...