alex Certify
ಕನ್ನಡ ದುನಿಯಾ       Mobile App
       

Kannada Duniya

ಬದಲಾಯ್ತು ರಾಹುಲ್ ಟ್ವೀಟರ್ ಅಕೌಂಟ್ ಹೆಸರು

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟರ್ ಅಕೌಂಟ್ ಹೆಸರು ಬದಲಾಗಿದೆ. ಇನ್ಮುಂದೆ @RahulGandhi ಟ್ವೀಟರ್ ಅಕೌಂಟ್ ಮೂಲಕ ರಾಹುಲ್ ಗಾಂಧಿ ಟ್ವಿಟ್ ಮಾಡಲಿದ್ದಾರೆ. ಈ ಹಿಂದೆ @OfficeOfRG ಮೂಲಕ ರಾಹುಲ್ ಗಾಂಧಿ ಟ್ವಿಟ್ ಮಾಡ್ತಿದ್ದರು.

ಸ್ವತಃ ರಾಹುಲ್ ಗಾಂಧಿ ತಮ್ಮ ಟ್ವೀಟರ್ ಅಕೌಂಟ್ ಹೆಸರು ಬದಲಾಗಿರುವುದನ್ನು ಸ್ಪಷ್ಟಪಡಿಸಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಟ್ವಿಟ್ ಮಾಡಿದ ರಾಹುಲ್ ಗಾಂಧಿ ನನ್ನ ಟ್ವೀಟರ್ ಅಕೌಂಟ್ ಹೆಸರು ಬದಲಾಗಿದೆ. ನಿಮ್ಮ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ ಎಂದಿದ್ದಾರೆ.

ಟ್ವೀಟರ್ ನಲ್ಲಿ ಕೇವಲ ಹೆಸರು ಮಾತ್ರ ಬದಲಾಗಿದೆ. ಉಳಿದ ಮಾಹಿತಿಯೆಲ್ಲ ಹಾಗೆ ಇದೆ. ಈಗಾಗ್ಲೇ ನೀವು @OfficeOfRG ಫಾಲೋ ಮಾಡ್ತಿದ್ದರೆ ಅದು @RahulGandhi ಗೆ ಬದಲಾಗಲಿದೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಸಿಕ್ತಿದ್ದಂತೆ ರಾಹುಲ್ ಗಾಂಧಿ ಅಧಿಕೃತ ಟ್ವೀಟರ್ ಖಾತೆ ಬದಲಾಗಲಿದೆ ಎಂದು ಊಹಿಸಲಾಗಿತ್ತು. ಆದ್ರೆ ಯಾವುದೇ ಬದಲಾವಣೆಯಾಗಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...